10 ಲಕ್ಷ ರೂ. ಅಸಲಿ ನೋಟಿಗೆ 30 ಲಕ್ಷ ರೂ. ಖೋಟಾ ನೋಟು ನೀಡಿ  ಪಂಗನಾಮ ಹಾಕಿದ್ದ ಮೂವರು ಅಂದರ್

ಬೆಂಗಳೂರು,ಅಕ್ಟೋಬರ್,18,2025 (www.justkannada.in): ಅಸಲಿ ನೋಟಿಗೆ ಖೋಟಾ ನೋಟು ಆಫರ್  ನೀಡಿ ವಂಚಿಸುತ್ತಿದ್ದ ಮೂವರು ವಂಚಕರನ್ನ ಬೆಂಗಳೂರಿನ ಜಯನರಗ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ವರನ್, ಮಿರಾನ್ ಮಹಿದುದ್ದೀನ್, ಶೇಖ್ ಮೊಹಮ್ಮದ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು 10 ಲಕ್ಷ ರೂ. ಅಸಲಿ ನೋಟಿಗೆ 30 ಲಕ್ಷ ರೂ. ಖೋಟಾ ನೋಟು ಆಫರ್ ಮಾಡಿದ್ದರು. ಜಯನಗರದಲ್ಲಿ ಹಣದ ಸಮೇತ ನಿಂತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತಮಿಳುನಾಡು ರಾಜ್ಯದಲ್ಲಿ ಸಕ್ರಿಯವಾಗಿದ್ದ ಈ ಗ್ಯಾಂಗ್‌ ಬೆಂಗಳೂರಿಗೂ ಕಾಲಿಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಒರಿಜಿನಲ್ ನೋಟಿಗೆ ಅದೇ ರೀತಿ ಕಾಣುವ ಮೂರು ಪಟ್ಟು ಹಣ ನೀಡುವುದಾಗಿ ವಂಚಕರು ಆಫರ್ ಮಾಡುತ್ತಿದ್ದರು. ಆರಂಭದಲ್ಲಿ ಒಂದೆರಡು ನೋಟುಗಳನ್ನ ತೋರಿಸಿ ನಂಬಿಕೆ‌ ಬರಿಸುತ್ತಿದ್ದರು.

ನಂತರ ಎಲ್ಲಾ ಒಂದೇ ರೀತಿ ಇರುತ್ತೆಂದು ಹಣ ಪಡೆಯಲು ಮುಂದಾಗುತ್ತಿದ್ದವರಿಗೆ ಶಾಕ್ ಕಾದಿರುತ್ತಿತ್ತು. ಒರಿಜಿನಲ್ ನೋಟಿನ ಬಂಡಲ್ ಮಧ್ಯೆ ಬಿಳಿಹಾಳೆ ಇಟ್ಟು ಈ ಗ್ಯಾಂಗ್ ಯಾಮಾರಿಸುತ್ತಿದ್ದರು ಎನ್ನಲಾಗಿದೆ.

Key words: Three people, arrested, fake note, Bangalore