ಇನ್ಫೋಸಿಸ್ ಅವರು ಬೃಹಸ್ಪತಿಗಳಾ? ಇದು 7 ಕೋಟಿ ಜನರ ಸಮೀಕ್ಷೆ- ಸಿಎಂ ಸಿದ್ದರಾಮಯ್ಯ ತಿರುಗೇಟು

ಮೈಸೂರು,ಅಕ್ಟೋಬರ್,17,2025 (www.justkannada.in);  ಸಾಮಾಜಿಕ , ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು  ತಮ್ಮ ಮಾಹಿತಿ ನೀಡಲು ನಿರಾಕರಿಸಿದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ  ಸಿಎಂ ಸಿದ್ದರಾಮಯ್ಯ, ಸಮೀಕ್ಷೆಗೆ ಸುಧಾಮೂರ್ತಿ ನಕಾರ ವಿಚಾರ . ಅದು ಅವರಿಗೆ ಬಿಟ್ಟಿದ್ದು. ಇನ್ಫೋಸಿಸ್ ಅವರು ಬೃಹಸ್ಪತಿಗಳಾ?. ಇದು ಹಿಂದುಳಿದವರ ಸಮೀಕ್ಷೆ  ಅಲ್ಲ. ಅವರಿಗೆ ತಪ್ಪು ಮಾಹಿತಿ ಇರಬಹುದು. ಕೇಂದ್ರ ಸರ್ಕಾರ ಸಮೀಕ್ಷೆಗೆ ಏನು ಉತ್ತರ ಕೊಡ್ತಾರೆ ನೋಡಣ. ಇದು 7 ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಎಂದರು.

ಈ ಬಾರಿ ಬಿಹಾರನಲ್ಲಿ ನಾವೇ ಗೆಲ್ಲುತ್ತೇವೆ

ಬಿಹಾರ ಚುನಾವಣೆ ಪರಿಸ್ಥಿತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಬಿಹಾರನಲ್ಲಿ ನಾವೇ ಗೆಲ್ಲುತ್ತೇವೆ. ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದರು. ನಮ್ಮ ಪಕ್ಷದ ಪರವಾಗಿ ಒಳ್ಳೆಯ ವಾತಾವರಣ ಇದೆ. ರಾಜ್ಯದ ಮೇಲೆ ಏನು ಪರಿಣಾಮ ಬೀರುತ್ತೆ? ಯಾವ ಕ್ರಾಂತಿ ಆಗತ್ತೆ. ಕ್ರಾಂತಿ ಅಂದರೆ ಏನ್ರಿ ಎಂದು ಪತ್ರಕರ್ತರಿಗೆ ಪ್ರಶ್ನೆ ಕೇಳಿದರು.

ಕರ್ನಾಟಕ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಅಲ್ಲಿ ನಂಬರ್ 1 ಇದೆ. ಆಂಧ್ರಕ್ಕೆ ಐಟಿ ಸಚಿವರ ಟ್ವೀಟ್ ಗೆ  ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ. ಅವರು ಬೇಕು ಅಂತಾನೇ ಮಾಡುತ್ತಿದ್ದಾರೆ. ಇನ್ವೆಸ್ಟ್ ಮಾಡೋರು ಎಲ್ಲಿ ಬೇಕಾದರೂ ಮಾಡುತ್ತಾರೆ. ಇದಕ್ಕೆ ಮಾಧ್ಯಮದವರು ಉಪ್ಪುಕಾರ ಹಾಕ್ಬೇಡಿ ಕರ್ನಾಟಕದಲ್ಲಿ ಹೈ ಫೋನ್ ತಯಾರಿಕ ಘಟಕ ತೆರೆದಿಲ್ವಾ? ಎಂದು ಪ್ರಶ್ನಿಸಿದರು.

5 ವರ್ಷ ತಂದೆಯೇ ಸಿಎಂ ಎಂಬ ಯತೀಂದ್ರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಕೇಳಿದ್ರೆ ಹೇಗೆ ಅವನನ್ನೇ ಕೇಳಿ. ನಾನೇನು ಹೇಳಿಲ್ಲ ಎಂದರು.  ಅವರು ಬೇಕಾದ್ರೆ ಕಮಿಷನ್ ವಿಚಾರ ಇಟ್ಟುಕೊಂಡು ಕೋರ್ಟ್ ಗೆ ಹೋಗಲಿ. ನಮ್ಮದೇನು ತಕರಾರು ಇಲ್ಲ ಎಂದರು.

ಸರ್ಕಾರಿ ಜಾಗದಲ್ಲಿ ಆರ್ ಎಸ್ ಎಸ್  ಬ್ಯಾನ್ ವಿಚಾರ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗಲೇ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದರು. ಸರ್ಕಾರಿ ಶಾಲಾ ಆವರಣಗಳು, ಜಾಗಗಳು  ಆರ್ ಎಸ್ ಎಸ್ ಗೆ ಮಾತ್ರವಲ್ಲ ಎಲ್ಲರಿಗೂ ಸಂಘಟನೆಗಳಿಗೂ ಅದು ಅಪ್ಲೈ ಅಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Key words: Infosys, Sudhamurthy, survey, CM Siddaramaiah