ಐವರು ಸಾಧಕರಿಗೆ 2025ನೇ ಸಾಲಿನ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರಕಟ

ಬೆಂಗಳೂರು,ಅಕ್ಟೋಬರ್,6,2025 (www.justkannada.in): ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐವರು ಸಾಧಕರಿಗೆ 2025ನೇ ಸಾಲಿನ  ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನ ರಾಜ್ಯ ಸರ್ಕಾರ ಪ್ರಕಟಿಸಿದೆ.

2025ನೇ ಸಾಲಿನ ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಯ್ಕೆ ಮಾಡಲು ದಿನಾಂಕ:03.10.2025 ರಂದು ನಡೆದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಣಯಿಸಿರುವಂತೆ, 2025ನೇ ಸಾಲಿಗೆ ವಿಭಾಗವಾರು 05 ಸಾಧಕರಿಗೆ ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲು ಮಂಜೂರಾತಿ ನೀಡಿ ಆದೇಶಿಸಿದೆ.

ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಹೀಗಿದೆ..

ನಾಗರಾಜು ಗಾಣದ ಹುಣಸೆ-ಬೆಂಗಳೂರು ಕೇಂದ್ರ,  ಮಾಧ್ಯಮ ಕ್ಷೇತ್ರ

ಪಿ. ತಿಪ್ಪೇಸ್ವಾಮಿ –  ಬೆಂಗಳೂರು ವಿಭಾಗ, ರಂಗಭೂಮಿ ಕ್ಷೇತ್ರ

ಜೆ.ಕೆ ಮುತ್ತಮ್ಮ –     ಮೈಸೂರು ವಿಭಾಗ,  ಸಂಘಟನೆ ಕ್ಷೇತ್ರ

ಮಳಸಿದ್ದ ಲಕ್ಷ್ಮಣ ನಾಯಕೋಡಿ- ಬೆಳಗಾವಿ ವಿಭಾಗ, ಸಮಾಜ ಸೇವೆ

ಕೆ.ಉಚ್ಚಂಗಪ್ಪ- ಕಲಬುರ್ಗಿ ವಿಭಾಗ, ಸಾಮಾಜಿಕ ಕ್ಷೇತ್ರ

Key words: Maharshi Valmiki Award 2025, announced , five ,achievers