MYSORE : ಹಿರಿಯ ವಕೀಲ ಅಶ್ವಿನ್ ಕುಮಾರ್ ಜೋಶಿ ನಿಧನ

ಮೈಸೂರು,ಅಕ್ಟೋಬರ್,2,2025 (www.justkannada.in): ಕ್ರಿಮಿನಲ್ ಪ್ರಕರಣಗಳಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ ಹಿರಿಯ ವಕೀಲ ಅಶ್ವಿನ್ ಕುಮಾರ್ ಜೋಶಿ(70) ಅವರು ನಿಧನರಾಗಿದ್ದಾರೆ.

ಅಶ್ವಿನ್ ಕುಮಾರ್ ಜೋಶಿ ಅವರು ಮೈಸೂರಿನ ಸರಸ್ವತಿ ಪುರಂನಲ್ಲಿ ವಾಸವಾಗಿದ್ದರು. ಜೋಶಿ ಅವರಿಗೆ ಪತ್ನಿ ಲಕ್ಷ್ಮಿ ಜೋಶಿ, ಮಗಳು ಡಾಕ್ಟರ್ ತ್ರಿವೇಣಿ ಜೋಶಿ, ಮಗ ಕಲ್ಯಾಣ್ ರಾಮ್ ಜೋಶಿ ಇದ್ದಾರೆ.

ಜೋಶಿ ಅವರ ಕಚೇರಿಯೆ ಒಂದು ಕಾನೂನು ಕಾಲೇಜ್ ಆಗಿತ್ತು. ನೂರಾರು ಕಾನೂನು ಪದವಿದರರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ ಉತ್ತಮ ವಕೀಲರಾಗಿ ಹೆಸರು ಗಳಿಸಿದ್ದಾರೆ. ಬಹಳಷ್ಟು ಮಂದಿ ರಾಜ್ಯದ ವಿವಿಧ ಕಡೆ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನಗೂ ಅವರ ಕಚೇರಿಯಲ್ಲಿ ವಕೀಲನಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ ವಕೀಲ ವೃತ್ತಿಯನ್ನು ಮುಂದುವರಿಸಿದವರು. ಶ್ರೇಷ್ಠ  ವಕೀಲರಾಗಿ, ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಸಲಹೆಗಾರರಾಗಿ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ನೌಕರಿಗೆ ಸರ್ಕಾರಿ ನೌಕರಿಗೆ ಸೇರುವ ಮುನ್ನ ಕಾನೂನಿನ ವಿಷಯದಲ್ಲಿ ಇರಬೇಕಾದಂತ ಜ್ಞಾನದ ಬಗ್ಗೆ  ನಿರಂತರವಾಗಿ ಮಾರ್ಗದರ್ಶನ  ನೀಡುತ್ತಿದ್ದರು.

ಬಹು ಮುಖ್ಯ ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಸಲಹೆ ನೀಡುತ್ತಿದ್ದರು. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅಶ್ವಿನ್ ಕುಮಾರ್ ಜೋಶಿ ಅವರ ನಿಧನಕ್ಕೆ ಹೆಚ್ ಎ ವೆಂಕಟೇಶ್ ಸಂತಾಪ

ಇನ್ನು ಹಿರಿಯ ವಕೀಲ ಅಶ್ವಿನ್ ಕುಮಾರ್ ಜೋಶಿ ನಿಧನಕ್ಕೆ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಅವರು ಸಂತಾಪ ಸೂಚಿಸಿದ್ದಾರೆ.

Key words: Mysore, Senior lawyer, Ashwin Kumar Joshi, dies