ಮೈಸೂರು, ಅಕ್ಟೋಬರ್,2,2025 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ಸಾಗಿದ್ದು ಕ್ಯಾಪ್ಟನ್ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಿದ್ದಾನೆ. ಈ ಬಾರಿ ಮೆರವಣಿಗೆಯಲ್ಲಿ 58 ಸ್ತಬ್ದಚಿತ್ರಗಳು ನೋಡುಗರನ್ನ ತನ್ನತ್ತ ಸೆಳೆದಿವೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿದ ಸ್ತಬ್ದಚಿತ್ರಗಳು ಅವುಗಳ ವಿಶೇಷತೆಗಳೇನು ಇಲ್ಲಿದೆ ನೋಡಿ ಮಾಹಿತಿ…
ಇಂದು ನಡೆದ ವಿಜಯ ದಶಮಿ ಮೆರವಣಿಗೆಯಲ್ಲಿ ಅಂಬಾ ವಿಲಾಸ ಅರಮನೆಯಿಂದ ಮೆರವಣಿಗೆ ಪ್ರಾರಂಭವಾಯಿತು. ಈ ವೇಳೆ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ವತಿಯಿಂದ ವಿಜಯದ ರನ್ ವೇ ಭಾರತದ ಆಕಾಶಕ್ಕೆ ಎಚ್ಎಎಲ್ನ ಶಕ್ತಿ ಸ್ತಬ್ಧಚಿತ್ರವು ಸಾಗಿದವು. ಇದಕ್ಕೂ ಮುನ್ನ ಮಧ್ಯಾಹ್ನ 1.18 ರಲ್ಲಿಸಲ್ಲಿದ ಶುಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ತೆರೆದ ಜೀಪಿನಲ್ಲಿ ನೆರೆದಿದ್ದವರಿಗೆಲ್ಲರಿಗೂ ಸ್ವಾಗತ ಕೋರಿದರು.
ಬಳಿಕ ನಿಶಾನೆ ಆನೆಗಳು ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಪುಷ್ಟಿ ನೀಡುವಂತೆ ಸಾಗಿದ್ದು, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಿಂದ ಆತ್ಮನಿರ್ಭರ ಭಾರತವನ್ನು ಮುನ್ನಡೆಸುತ್ತಿದೆ ರಕ್ಷಣಾ ಚಲನಶೀಲತೆಯಲ್ಲಿ, ಭಾರತೀಯ ರೈಲ್ವೆ ಇಲಾಖೆಯಿಂದ ಚಿನಾಬ್ ಸೇತು ಹಾಗೂ ಪಂಬನ್ ಸೇತು, ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಭೋವಿ ಸಮುದಾಯದವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳು, ಮಂಡ್ಯ ಜಿಲ್ಲೆಯಿಂದ “ಸ್ವಾತಂತ್ರ್ಯ ಹೋರಾಟದ ದೀಪ-ಶಿವಪುರದ ಧ್ವಜ ಸತ್ಯಾಗ್ರಹ”, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಜ್ಞಾನಿ -ವಿಜ್ಞಾನಿಗಳ ನಾಡು, ನಗರಾಭಿವೃದ್ಧಿ ಇಲಾಖೆಯಿಂದ ಸ್ಮಾರ್ಟ್, ಶುದ್ದ ಕಾಳಜಿಯ ನಗರಗಳು, ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಾಸ್ಥ್ಯ ಮತ್ತು ಸುಸ್ಥಿರ ಮೈಸೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಕುರಿತು ಮೆರವಣಿಗೆಯಲ್ಲಿ ಕಲಾ ತಂಡಗಳೊಂದಿಗೆ ಒಂದರ ಹಿಂದೆ ಒಂದರಂತೆ ಸಾಗಿತು.
ಧಾರವಾಡ ಜಿಲ್ಲೆಯಿಂದ ರಾಷ್ಟ್ರದ ತಯಾರಿಕಾ ಕೇಂದ್ರ ಗರಗ ಕಲಘಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ”, ಉತ್ತರ ಕನ್ನಡ ಜಿಲ್ಲೆಯಿಂದ ರಾಣಿ ಚೆನ್ನಭೈರದೇವಿ ಮಸಾಲೆ ರಾಣೆ, ಬಾಗಲಕೋಟೆ ಜಿಲ್ಲೆಯಿಂದ ಕೂಡಲಸಂಗಮ ಮತ್ತು ಶಿಲ್ಪಕಲೆಗಳ ನಾಡು, ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ, ಶಿವಮೊಗ್ಗ ಜಿಲ್ಲೆಯಿಂದ ಕೇದಾರೇಶ್ವರ ದೇವಸ್ಥಾನ, ಬಳ್ಳಿಗಾವಿ, ಬಳ್ಳಾರಿ ಜಿಲ್ಲೆಯಿಂದ ಸೆಪ್ಟೆಂಬರ್ ನಲ್ಲಿ ಸಂಡೂರು ನೋಡು, ವಿಜಯಪುರ ಜಿಲ್ಲೆಯಿಂದ ಶಿವನ ಪ್ರತಿಮೆ ಶಿವಗಿರಿ ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿಬಿಂಬಿಸುವ ಕಲೆ ದೈವಾರಾಧನೆ ಹಾಗೂ ಸಾಂಪ್ರದಾಯಿಕ ಕ್ರೀಡೆ, ಕಲಬುರಗಿ ಜಿಲ್ಲೆಯಿಂದ ಶರಣಬಸವೇಶ್ವರ ಸಂಸ್ಥಾನ. ಮಹಾದಾಸೋಹಿ ಪೀಠ ಮತ್ತು ಬಹುಮನಿ ಸುಲ್ತಾನ ಸಾಮ್ರಾಜ್ಯ, ತುಮಕೂರು ಜಿಲ್ಲೆಯಿಂದ “ನವ್ಯ ಮತ್ತು ಪ್ರಾಚೀನ ಶಿಲ್ಪ ಕಲಾ ಸಂಕೀರ್ಣ ನಮ್ಮ ತುಮಕೂರು ಜಿಲ್ಲೆ”, ಉಡುಪಿ ಜಿಲ್ಲೆಯಿಂದ ಸ್ವಚ್ಛ ಉಡುಪಿ, ಕೊಡಗು ಜಿಲ್ಲೆಯಿಂದ ಕೊಡಗಿನ ಚಾರಣ ಪಥಗಳು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಅಭೂತಪೂರ್ವ ಸಾಧನ,
ಹಾವೇರಿ ಜಿಲ್ಲೆಯಿಂದ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಘಾಟಿ ಸುಬ್ರಮಣ್ಯ ದಏವಸ್ಥಾನ, ದೇವನಹಳ್ಳಿ ಕೋಟೆ ಮತ್ತು ಕೆಂಪೇಗೌಡರ ವಿಗ್ರಹ, ಚಿಕ್ಕಮಗಳೂರು ಜಿಲ್ಲೆಯಿಂದ ಭದ್ರಬಾಲ್ಯ ಯೋಜನೆ ಚಿಕ್ಕಮಗಳೂರು ಜಿಲ್ಲೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ -ಕರ್ನಾಟಕದಿಂದ ಡ್ರಗ್ಸ್ ಮುಕ್ತ ಕ್ಯಾಂಪಸ್ ಅಭಿಯಾನ, ಗದಗ ಜಿಲ್ಲೆಯಿಂದ ಜೋಡು ಕಳಸದ ಗುಡಿ, ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ)ದಿಂದ ಚನ್ನಪಟ್ಟಣ ಗೊಂಬೆ, ಹೈನುಗಾರಿಕೆ ರೇಷ್ಮೆ, ಮೈಸೂರು ಜಿಲ್ಲೆಯಿಂದ ಬದನವಾಳು ನೂಲುವ ಪ್ರಾಂತ್ಯ, ಬೆಂಗಳೂರು ನಗರ ಜಿಲ್ಲೆಯಿಂದ ಬ್ರಾಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಶುದ್ಧ ಇಂಧನ ಮತ್ತು ಸಂಪನ್ಮೂಲ ಸಂರಕ್ಷಣೆಯ ಮೂಲಕ ಗ್ರಾಮೀಣ ಭಾರತದ ಸಶಕ್ತೀಕರಣ, ಚಾಮರಾಜನಗರ ಜಿಲ್ಲೆಯಿಂದ ಪ್ರಕೃತಿಯ ಸೌರ್ಹದತೆಯೊಂದಿಗೆ ಪ್ರಗತಿಯತ್ತ ಸಾಗೋ, ಬೆಳಗಾವಿ ಜಿಲ್ಲೆಯಿಂದ ಶ್ರೀ ಮಹಾಕಾಳಿ ಮಾಯಕ್ಕಾ ದೇವಿ ದೇವಸ್ಥಾನ ಚಿಂಚಲಿ, ವಿಜಯನಗರ ಜಿಲ್ಲೆಯಿಂದ ವಿಶಿಷ್ಟ ವಿಜಯನಗರ-ವಿಜಯನಗರ ಜಿಲ್ಲೆಯ ವೈಶಿಷ್ಟ್ಯತೆಗಳು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಜ್ಞಾನವೇ ದಿವ್ಯಜ್ಯೋತಿ (ಸಮಾಜ ಕಲ್ಯಾಣ ಇಲಾಖೆ), ಹಾಸನ ಜಿಲ್ಲೆಯಿಂದ ಗೊಮ್ಮಟೇಶ್ವರ – ಕಾಫಿ, ಬೀದರ್ ಜಿಲ್ಲೆಯಿಂದ ಬೀದರ ಕೊಟೆ, ದಾವಣಗೆರೆ ಜಿಲ್ಲೆಯಿಂದ ಮನೆ ಮನೆಗೆ ಗಂಗೆ, ಚಿತ್ರದುರ್ಗ ಜಿಲ್ಲೆಯಿಂದ ರಾಜವೀರ ಮದಕರಿ ನಾಯಕ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಭವ್ಯ ಭವಿಷ್ಯ ನಿರ್ಮಿಸುವ ಕಾರ್ಯಪರಿಸರ, ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಉದ್ಯೋಗವಕಾಶ ಮತ್ತು ಸ್ವಾವಲಂಬನೆ, ಕಾರ್ಮಿಕ ಇಲಾಖೆಯಿಂದ ಇಲಾಖಾ ಕಾರ್ಯಕ್ರಮಗಳು, ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಕೌಶಲ್ಯ ಅಭಿವೃದ್ಧಿ ಯೋಜನೆಯಿಂದ ಚರ್ಮ ಕುಶಲಕರ್ಮಿಗಳ/ಚರ್ಮಗಾರಿಕೆಯ ಇತಿಹಾಸ, ಕಾವೇರಿ ನೀರಾವರಿ ನಿಗಮ (ನಿ.) ಮೈಸೂರಿನಿಂದ ಕರುನಾಡಿನ ಜೀವನಾಡಿ ನದಿಗಳಿಂದ ಸಮೃದ್ಧವಾದ ಕರುನಾಡು, ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದಿಂದ ಕರ್ನಾಟಕದ ಹೆಮ್ಮೆಯ ಸಂಕೇತ ಮೈಸೂರು ರೇಷ್ಮೆ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಇಲಾಖಾ ಕಾರ್ಯಕ್ರಮಗಳು, ಕರ್ನಾಟಕ ಹಾಲು ಮಹಾಮಂಡಳಿ ನಿ. (ಕೆ.ಎಂ.ಎಫ್)ನಿಂದ ನಂದಿನಿ ಹಾಲಿನ ಶುಭ್ರತೆ… ನೀಡಿದೆ ರೈತ ಪರಿವಾರಕ್ಕೆ ಭದ್ರತೆ ಮತ್ತು ಹೈನೋದ್ಯಮದ ಮೂಲಕ ಮಹಿಳಾ ಸಬಲೀಕರಣ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟರ ಸಮಗ್ರ ಅಭಿವೃದ್ಧಿ – ನಮ್ಮ ಧ್ಯೇಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಲಾಖಾ ಕಾರ್ಯಕ್ರಮಗಳು,
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಕರ್ನಾಟಕ ತಾಂಡಾ ಅಭಿವೃದಿ ನಿಗಮ ಸ್ಥಾಪನೆಯ ಧೈಯೋದ್ದೇಶಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ರಾಯಚೂರು ಜಿಲ್ಲೆಯಿಂದ ಸರ್ವ ಧರ್ಮ ಸಾಮರಸ್ಯದ ನೆಲೆಬೀಡು, ರಾಯಚೂರು, ಕೋಲಾರ ಜಿಲ್ಲೆಯಿಂದ “ರೇಷ್ಮೆ, ಹೈನುಗಾರಿಕೆ ಮತ್ತು ಮಾವು”, ಯಾದಗಿರಿ ಜಿಲ್ಲೆಯಿಂದ ಟೇಲರ್ ಮಂಜಿಲ್ – 1844 ಸುರಪುರ, ಪ್ರವಾಸೋದ್ಯಮ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ “ಕಲಿಕಾ ನ್ಯೂನತೆ”, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜ್ಞಾನವೇ ಶಕ್ತಿ, ಶಿಕ್ಷಣವೇ ಆಸ್ತಿ ಎಂಬುದೇ ಸಂಸ್ಥೆಯ ಪರಮ ಧೈಯ ಬುದ್ಧಿವಂತಿಕೆ, ಸಮಾನತೆ, ಭರವಸೆಗಳೇ ಇಲಾಖೆಯ ಮೊದಲ ಆದ್ಯತೆ ಹೀಗೆ ಒಟ್ಟಾರೆ 58 ಸ್ತಬ್ದ ಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಾ ದಸರಾ ಮೆರಗು ಹೆಚ್ಚಿಸಿದವು.
Key words: Mysore dasara, Jambu Savari, 58 tablo, special