ಸ್ವಂತಮನೆ ಕಟ್ಟಿದವರಿಗೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಇಲ್ಲ; ಇದು ಕೇಂದ್ರ ಮಾಡಿರುವ ಕಾನೂನು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಸೆಪ್ಟಂಬರ್, 27,2025 (www.justkannada.in): ಸ್ವಂತಮನೆ ಕಟ್ಟಿದವರಿಗೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಇಲ್ಲ ಎಂಬ ಆಹಾರ ಸಚಿವ ಕೆಎಚ್ ಮುನಿಯಪ್ಪ ಹೇಳಿಕೆ ಬಗ್ಗೆ  ಸಾರಿಗೆ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಇದು ಕೇಂದ್ರ ಸರ್ಕಾರ ಮಾಡಿರುವ ಕಾನೂನು. ಕೇಂದ್ರ ಸರ್ಕಾರದ ಆದೇಶನ್ನ ಎಲ್ಲಾ ರಾಜ್ಯಗಳಲ್ಲಿಅಳವಡಿಸಲಾಗುತ್ತದೆ ಇದು ಬಿಜೆಪಿಯವರಿಗೂ ಗೊತ್ತಿದೆ ಆದರೆ ಚೇಷ್ಟೆ ಮಾಡ್ತಾರೆ ಎಂದು ಕಿಡಿಕಾರಿದರು.

ಬಿಜೆಪಿಯವರು ಎಲ್ಲದಕ್ಕೂ ಕಾಗ್ರೆಂಸ್ ಅಂತಾರೆ ಗಾಂಧಿ ನೆಹರು ಸತ್ತು ಎಷ್ಟು ವರ್ಷ ಆಗಿದೆ . ಈಗಲೂ ಅವರ ಬಗ್ಗೆ ಕಾಮೆಂಟ್ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಜಾತಿಗಣತಿಗೆ ಸರ್ವಸಮಸ್ಯೆ ನಿಜ ನಿಗಧಿತ ಸಮಯದಲ್ಲಿ  ಸಮೀಕ್ಷೆ ಮುಗಿಸಲು ಸೂಚನೆ ನೀಡಲಾಗಿದೆ.  ಸಮಯ ವಿಸ್ತರಣೆ ಮಾಡಿ ಅಂತಾ ಶಿಕ್ಷಕರು ಮನವಿ ಮಾಡುತ್ತಿದ್ದಾರೆ.  ಅವಧಿಯೊಳಗೆ ಗಣಿತಿ ಮುಗಿಯುವ ಸಾಧ್ಯತೆ ಇದೆ ಎಂದರು.

Key words: own houses, BPL cards, Minister, Ramalinga Reddy