ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ: ಇಂದಿನಿಂದ ಸಮೀಕ್ಷೆ ಚುರುಕು- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಸೆಪ್ಟಂಬರ್,26,2025 (www.justkannada.in): ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಸಂಬಂಧ ಡಿಸಿ, ಸಿಇಒಗಳ ಜೊತೆ ಸಂವಾದ ನಡೆಸಿ ಚರ್ಚಿಸಲಾಗಿದ್ದು ತಾಂತ್ರಿಕ ಸಮಸ್ಯೆ ನಿವಾರಣೆಗೆ ಸೂಚನೆ ನೀಡಲಾಗಿದೆ. ಇಂದಿನಿಂದ ಸಮೀಕ್ಷೆ ಕಾರ್ಯ ಚುರುಕಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ರಾಜ್ಯದ ಎಲ್ಲಾ ಡಿಸಿಗಳು, ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮೀಕ್ಷೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆ ನಿವಾರಣೆ ಮಾಬೇಕು ಎಂದು ವಿಡಿಯೋ ಸಂವಾದದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇವತ್ತಿನಿಂದ ವ್ಯವಸ್ತಿತವಾಗಿ ಸರ್ವೆಕಾರ್ಯ ನಡೆಯಲಿದೆ.  ಇಂದಿನಿಂದ ಸರ್ವೇ ಕಾರ್ಯ ಚುರುಕಾಗಲಿದೆ ಎಂದರು.

ಡಿಸಿಎಗಳು ಹೇಳುವ ಪ್ರಕಾರ ಶೇ 90 ರಷ್ಟು ತಾಂತ್ರಿಕ ಸಮಸ್ಯೆಗಳು ಪರಿಹಾರವಾಗಿದೆ.  ಕಳೆದ 4 ದಿನಗಳಿಂದ ಸರ್ವೇಕಾರ್ಯ ಕುಂಠತವಾಗಿತ್ತು. ಆದರಿ ಇಂದು ಚುರುಕಾಗಿದೆ . ಏನೆಲ್ಲಾ ತೊಡಕು ಇದ್ದಾವೆ ಅವುಗಳನ್ನೆಲ್ಲಾ ನಿವಾರಿಸುವಂತೆ ಸೂಚಿಸಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಯುತ್ತಿದೆ    ಪ್ರತಿದಿನ ಶೇ 10 ರಷ್ಟು ಸಮೀಕ್ಷೆ ಆಗಬೇಕು. ನಾವು ಮಾಡುತ್ತೇವೆ ಎಂದು ಡಿಸಿಗಳು ಒಪ್ಪಿಕೊಂಡಿದ್ದಾರೆ ಶಿಕ್ಷಕರ ಕೆಲ ತಪ್ಪುಕಲ್ಪನೆಗಳಿದ ಸಮೀಕ್ಷೆಗೆ ಸಮಸ್ಯೆ ಆಗಿತ್ತು. ಎಲ್ಲರೂ ಕೂಡ ಒಪ್ಪಿಕೊಂಡು ಸಮೀಕ್ಷೆ ಶುರು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Social Educational Survey, officers, expedited, today, CM Siddaramaiah