ಆಟವಾಡುತ್ತಲೇ ಮನೆ ಮುಂದಿನ ಚರಂಡಿಗೆ ಬಿದ್ದು ಪ್ರಾಣಬಿಟ್ಟ ಮಗು

ಬಳ್ಳಾರಿ,ಸೆಪ್ಟಂಬರ್,26,2025 (www.justkannada.in): 4 ವರ್ಷದ ಬಾಲಕ ಆಟವಾಡುತ್ತಾ ಮನೆಮುಂದಿನ ಚರಂಡಿಗೆ ಬಿದ್ದು ನರಳಾಡಿ, ಪ್ರಾಣಬಿಟ್ಟಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕುರಿಕೊಪ್ಪ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರವಿಂದ್ ಮೃತಪಟ್ಟ ಬಾಲಕ ಮನೆಯ ಮುಂದೆ ಅರವಿಂದ್ ಆಟವಾಡುತ್ತಿದ್ದ. ಈ ವೇಳೆ ಕಾಲು ಜಾರಿ ಚರಂಡಿಗೆ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.  ಚರಂಡಿ ಬಿದ್ದ ಬಾಲಕ ಪ್ರಾಣಬಿಟ್ಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಟುಂಬಸ್ಥರು ರಾತ್ರಿಯಿಡಿ ಮಗುವಿಗಾಗಿ ಹುಡುಕಾಟ ನಡೆಸಿದ್ದು ಬಾಲಕ ಪತ್ತೆಯಾಗಿರಲಿಲ್ಲ. ಆದರೆ ಬೆಳಿಗ್ಗೆ ಚರಂಡಿಯಲ್ಲಿ ನೋಡಿದಾಗ ಮಗುವಿನ ಮೃತ ದೇಹ ಪತ್ತೆಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Key words: Child, dies ,falling, drainage, house