ಮೈಸೂರು: ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಂತಿಮ ದರ್ಶನ ಪಡೆದ  ರಾಜಕೀಯ ಗಣ್ಯರು

ಮೈಸೂರು,ಸೆಪ್ಟಂಬರ್,25,2025 (www.justkannada.in):  ನಿನ್ನೆ ನಿಧನರಾದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಪಾರ್ಥೀವ ಶರೀರವನ್ನ ಮೈಸೂರಿಗೆ ತರಲಾಗಿದ್ದು ಕಲಾಮಂದಿರದ ಆವರಣದಲ್ಲಿ  ಬಳಿ ಸಾರ್ವಜನಿಕರಿಗೆ ಅಂತಿಮ ನಮನಕ್ಕೆ ಅವಕಾಶ ನೀಡಲಾಗಿದೆ.

ಇಂದು ಸಂಜೆ 6.30ರವರೆಗೆ ಕಲಾಮಂದಿರ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನಕ್ಕೆ ಅವಕಾಶ ನೀಡಲಾಗಿದ್ದು ನಂತರ ಜೆಎಸ್ ಎಸ್ ಶವಗಾರಕ್ಕೆ ಪಾರ್ಥಿವ ಶರೀರ ಶಿಫ್ಟ್ ಆಗಲಿದೆ. ನಾಳೆ ಬೆಳಗ್ಗೆ 8.30ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ‌ ನಡೆದು  ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

 ಅಂತಿಮ ದರ್ಶನ ಪಡೆದ ರಾಜಕೀಯ ಗಣ್ಯರು

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಹೆಚ್.ಸಿ ಮಹದೇವಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಎಂಎಲ್ ಸಿ ಶಿವಕುಮಾರ್ ಸೇರಿ ಹಲವು ರಾಜಕೀಯ ಗಣ್ಯರು ಎಸ್.ಎಲ್.ಭೈರಪ್ಪ ಅವರ ಅಂತಿಮ ದರ್ಶನ ಪಡೆದರು.

ಎಸ್ ಎಲ್ ಬೈರಪ್ಪ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಹೆಚ್ ವಿಶ್ವನಾಥ್ , ಕನ್ನಡನಾಡಿನ ಸಾಹಿತ್ಯ ಲೋಕದ ದಿಗ್ಗಜ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಎಲ್ಲಾ ವಯಸ್ಸಿನವರನ್ನ ಸಾರ್ಥಕತೆಯಿಂದ ಬೆರೆಯುವಂತೆ ಮಾಡಿದವರು. ಇಂತಹ ಸಾಹಿತ್ಯಗೆ ಜ್ಞಾನಪೀಠ, ರಾಜೋತ್ಸವ ಪ್ರಶಸ್ತಿ ಸಿಗಲಿಲ್ಲ. ಇದು ಸರ್ಕಾರದ ಉತ್ಪೇಕ್ಷೆಯೋ ರಾಜಕಾರಣವೋ ಗೊತ್ತಿಲ್ಲ. ಆದರೆ ಹೀಗೆ ಆಗಬಾರದಿತ್ತು. ಸಾಹಿತ್ಯ ಲೋಕಕ್ಕೆ ರಾಜಕಾರಿಗಳು ಮಾಡಿದ ಅಪಮಾನ. ನಾನು ಅವರನ್ನ ಟೀಕೆ ಮಾಡಿದ್ದೆ.  ಅವರ ಮನೆಗೆ ಹೋಗಿ ಆ ಬಗ್ಗೆ ಮಾತು ಆಡಿದ್ದೆ. ಎಸ್ಎಲ್ ಬೈರಪ್ಪ ಹೆಸರು ನಿರಂತರ ಎಂದರು.

ಎಸ್ ಎಲ್ ಭೈರಪ್ಪರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಎಸ್ ಬೈರಪ್ಪನವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ಕಾದಂಬರಿಗಳು, ಸಾಹಿತ್ಯ ಯುವಜನತೆಯ ಓದುವ ದಿಕ್ಕನ್ನೆ ಬದಲಾಯಿಸಿತು. ಅವರದ್ದು ಸಮಾಜದ ಬೇರನ್ನೆ ಅಲುಗಾಡಿಸಿದ ಕೃತಿಗಳು. ಸಮಾಜದ ನೈಜ ಸಂಗತಿಗಳನ್ನ ಬರೆದ್ರು. ನಿಜ ಜೀವನಕ್ಕೆ ಹತ್ತಿರವಾದ ಸಂಗತಿಗಳನ್ನೆ ಬರೆಯುತ್ತಿದ್ರು. ತೀರ ಬಡತನದಿಂದ ಬಂದವರು ಅವರು ಅದನ್ನ ಅನುಭವಿಸಿದವರಿಗೆ ಆ ನೋವು ಗೊತ್ತು. ಯುವಜನರನ್ನ ಮುನ್ನಲೆಗೆ ತರುವ ಕೆಲಸ ಮಾಡಿದ್ರು. ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳು ಸಕಲ ಸರ್ಕಾರಿ ಗೌರವದಿಂದ ಮಾಡಲು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಭೈರಪ್ಪರ ಸ್ಮಾರಕವನ್ನ ಮೈಸೂರಿನಲ್ಲಿ ನಿರ್ಮಾಣಕ್ಕೆ ತಿಳಿಸಿದ್ದಾರೆ ಎಂದರು.

ಭೈರಪ್ಪರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೋಮ್ಮಾಯಿ, ಸಾಹಿತ್ಯ ಲೋಕದಲ್ಲಿ ಕ್ರೀಯಾ ಶೀಲ, ಸಾಹಿತಿ ನಮ್ಮನ್ನ ಅಗಲಿದ್ದಾರೆ. ತಮ್ಮನ್ನ ತಾವೇ ಆಚೆ ಇಟ್ಟುಕೊಂಡು ತಮ್ಮನ್ನ ತಾವೇ ವಿಶ್ಲೇಷಣೆ ಮಾಡಿಕೊಳ್ತಿದ್ರು. ವೈಚಾರಿಕತೆ, ವಸ್ತುಸ್ಥಿತಿಯ ಸಾಹಿತ್ಯ ರಚನೆ ಮಾಡುವ ವ್ಯಕ್ತಿತ್ವ. ಈ ರೀತಿಯ ವೈಚಾರಿಕತೆಯ ವ್ಯಕ್ತಿತ್ವ ಬಹಳ ಅಪರೂಪ. ಎಲ್ಲವನ್ನು ಕೂಡ ಸತ್ಯದ ದೃಷ್ಠಿಯಿಂದ ನೋಡ್ತಾಯಿದ್ರು. ಎಷ್ಟೇ ಎತ್ತರ ಬೆಳೆದ್ರು ತಮ್ಮ ಬೇರನ್ನ ಭೈರಪ್ಪನವರು ಮರೆಯಲಿಲ್ಲ. ನಾನು ಮುಖ್ಯಮಂತ್ರಿಯಾದ ಪ್ರಶಸ್ತಿ ಕೇಳಿಲ್ಲ ಬೇರೆ ಏನನ್ನು ಕೇಳಿಲ್ಲ. ನನಗೆ ಅವರು ಕೇಳಿದ್ದು ನಮ್ಮ ಊರಿಗೆ ನೀರು ಕೊಡಪ್ಪ ಅಂದ್ರು. ನಾವು ಅದನ್ನ ಫಾಲೋ ಅಪ್ ಮಾಡಿದ್ವಿ. ರೈತರ ಬಗ್ಗೆ ಊರಿನ ಬಗ್ಗೆ ಕೆರೆ ಬಗ್ಗೆ ಅಪಾರ ಪ್ರೀತಿ. ಉತ್ತರಾಯಣದಲ್ಲಿ ರಾಮಾಯಣದಲ್ಲಿ ಮತ್ತೊಂದು ಆಯಾಮ. ಅದರ ಜೊತೆ ಮಹಾಭಾರತದ ಮತ್ತೊಂದು ಆಯಾಮ. ವಂಶವೃಕ್ಷ ಕಾದಂಬರಿ ದೇಶಾದ್ಯಂತ ಕ್ರಾಂತಿ ಉಂಟಾಯ್ತು ಬಳಿಕ ಅದು ಸಿನಿಮಾ ಆಯ್ತು ಎಂದರು.

ಎಸ್.ಎಲ್.ಭೈರಪ್ಪ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ  ಎಂಎಲ್‌ಸಿ ಶಿವಕುಮಾರ್, ಕನ್ನಡ ಸಾರಸ್ವತ ಲೋಕಕ್ಕೆ ಭೈರಪ್ಪನವರ ಕೊಡುಗೆ ಅಪಾರ. ಜಗತ್ತಿನ 42 ಭಾಷೆಗಳಲ್ಲಿ ಅವರ ಕಾದಂಬರಿಗಳು ಅನುವಾದವಾಗಿದೆ. ಜಗತ್ತಿನಾದ್ಯಂತ ಯಾರಾದ್ರು ಓರ್ವ ಸ್ಟಾರ್ ಕಾದಂಬರಿಕಾರ ಅಂದ್ರೆ ಭೈರಪ್ಪ. ಧರ್ಮದ ಬಗ್ಗೆ, ಸಾಹಿತ್ಯದ ಬಗ್ಗೆ ಬರಯಬೇಕಿದ್ರೆ ಅವ್ರು ಅಲ್ಲೇ ಹೋಗಿ ಅವರ ಜೊತೆಯೆ ಇದ್ದು ಬರೆಯುತ್ತಿದ್ದರು. ಯಾರದು ಏನೇ ಐಡಿಯಾಲಾಜಿಕಲಿ ಡ್ರಿಫ್ರೆನ್ಸ್ ಇದ್ರು ಎಲ್ಲರು ಅವರನ್ನ ಗೌರವಿಸುತ್ತಾರೆ. ಅವಾರ್ಡ್ ಬಂದ್ರು ಸಮಾಜಕ್ಕೆ ಕೊಟ್ರೆ ಹೊರತು ಮನೆಗೆ ತೆಗೆದುಕೊಂಡು ಹೋಗಲಿಲ್ಲ. ಭೈರಪ್ಪನವರ ಹೆಸರು ಶಾಶ್ವತವಾಗಿ ಉಳಿಸೋ ಕೆಲಸವನ್ನ ನಾವು ಮಾಡೋಣ. ತಾಯಿ ಹೆಸರಿನಲ್ಲಿ ಅವರ ಊರಿನಲ್ಲಿ ಲೈಬ್ರೇರಿ ತೆರೆದಿದ್ರು. ನನ್ನ ಶಾಂತಿಯುತ ಪ್ರಣಾಮವನ್ನ ತಿಳಿಸಲು ಬಯಸುತ್ತೇನೆ ಎಂದರು.

Key words: Mysore, Writer,  SL Bhairappa, Political Leader