ಡಿಸಿಎಂ ಡಿಕೆ ಶಿವಕುಮಾರ್ ರಸ್ತೆಗುಂಡಿ ಹೇಳಿಕೆಗೆ ಆರ್.ಅಶೋಕ್ ತಿರುಗೇಟು

ಬೆಂಗಳೂರು,ಸೆಪ್ಟಂಬರ್,24,2025 (www.justkannada.in):  ನವದೆಹಲಿಯ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮುಂದೆಯೂ ಗುಂಡಿಗಳಿವೆ ಎಂದು ಟೀಕಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ, ಡಿಕೆ ಶಿವಕುಮಾರ್ ಅವರೇ ಬ್ಯಾಟರಿ ತೆಗೆದುಕೊಂಡು ಫ್ಲೈಟ್ ಹತ್ತಿ ಅಮೆರಿಕಾಕ್ಕೆ ಹೋಗಿ ಟ್ರಂಪ್ ಮನೆ ಮುಂದೆ ಗುಂಢಿ ಇದೆಯಾ ನೋಡಿ. ಮೊದಲು ನಿಮ್ಮ ಮನೆ ನೋಡಿಕೊಳ್ಳಿ ಡಿಕೆಶಿ ಅವರೇ. ನಿಮ್ಮ ಬಳಿ ಹಣ ಇಲ್ಲ ಅಂತಾದರೆ ಓಪನ್ ಆಗಿ ಹೇಳಿಬಿಡಿ ಮುಚ್ಚಿದ ಗುಂಡಿ ಲೆಕ್ಕ ಕೇಳ್ತೀರಿ ಎಷ್ಟು ಗುಂಡಿಗಳಿವೆ ಎಂಬ ಬಗ್ಗೆ ಲೆಕ್ಕ ಹೇಳಿ ಎಂದರು.

ರಾಜ್ಯ ಸರ್ಕಾರ ಪಾಪರ್ ಆಗಿದೆ. ಸರ್ಕಾರದ ಬಳಿ ಹಣ ಇಲ್ಲ . ರಸ್ತೆ ಗುಂಡಿಗಳನ್ನ ನಾವೇ ಮುಚ್ಚೋಣ ಜನ ಸಹಕಾರ ನೀಡಬೇಕು ಎಂದು ಆರ್. ಅಶೋಕ್ ಮನವಿ ಮಾಡಿದರು.

Key words: Potholes, DCM DK Shivakumar, statement, R. Ashok