ಬೆಂಗಳೂರಿನ ಸರ್ವೋದಯ ಶಿಕ್ಷಣ  ‍ಟ್ರಸ್ಟ್ ನಿಂದ ವಾಕ್ ಮತ್ತು ಶ್ರವಣ ಪದವಿ  ಆರಂಭ

ಬೆಂಗಳೂರು,ಸೆಪ್ಟಂಬರ್,23,2025 (www.justkannada.in):  ಬೆಂಗಳೂರಿನ ಎ ದಾಸರಹಳ್ಳಿಯಲ್ಲಿರುವ ಸರ್ವೋದಯ ಶಿಕ್ಷಣ  ಟ್ರಸ್ಟ್ನ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ಆಡಿಯೋಲಜಿ ಅಂಡ್ ಸ್ಪೀಚ್ ಲಾಂಗ್ವೇಜ್ ಪೆಥಾಲಜಿ (ಬಿಎಸ್‌ಎಲ್‌ಪಿ) ಪದವಿ ಶಿಕ್ಷಣವನ್ನು ಆರಂಭಿಸಲಾಯಿತು. ಭಾರತೀಯ ಪುನರ್ವಸತಿ ಮಂಡಳಿಯಡಿ ಬೆಂಗಳೂರಿನ ಜ್ಞಾನ ಭಾರತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜನೆ ಪಡೆದಿರುವ ಪದವಿ ಹಂತದ ವಾಕ್ ಮತ್ತು ಶ್ರವಣ ಶಿಕ್ಷಣವನ್ನು ಇಲ್ಲಿ ಪ್ರಾರಂಭಿಸಲಾಗಿದೆ.

ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ಭಾರತದಲ್ಲಿಯೇ ಮೊದಲ ಪಿಎಚ್ ಡಿ ಪದವೀಧರರು, ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸಮಗ್ರ ಸುಧಾರಣೆಗೆ ಒತ್ತು ನೀಡಿದವರು ಹಾಗೂ ನಿಮ್ಹಾನ್ಸ್‍ನಲ್ಲೂ ತಜ್ಞರಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಡಾ.ಎಂ.ಜಯರಾಂ ಅವರ ಮಾರ್ಗದರ್ಶನದಲ್ಲಿಯೇ ಬೆಂಗಳೂರಿನ ಸರ್ವೋದಯ ಶಿಕ್ಷಣ  ಟ್ರಸ್ಟ್‍ನಲ್ಲಿ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ  ಪದವಿ ಕೋರ್ಸ್‍ ಶುರು ಮಾಡಲಾಗಿದೆ.

ಬಿಎಸ್‌ಎಲ್‌ಪಿ ಕೋರ್ಸ್‍ಗೆ  ಚಾಲನೆ ನೀಡಿದ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕರಾದ ಡಾ.ಎಂ.ಪುಷ್ಪಾವತಿ ಮಾತನಾಡಿ, ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಸರ್ವೋದಯ ಶಿಕ್ಷಣ ಟ್ರಸ್ಟ್ ಅಕ್ಷರ ದಾಸೋಹ, ವಿದ್ಯಾದಾನದ ಮೂಲಕ ಗಮನ ಸೆಳೆದಿದೆ. ಈಗ ಶ್ರವಣ ದೋಷವುಳ್ಳ ಅಂಗವಿಕಲ    (ವಿಕಲಚೇತನ) ಶಿಕ್ಷಣವನ್ನು ಆರಂಭಿಸಿರುವುದು ಸ್ತುತ್ಯಾರ್ಹ.

ಮೈಸೂರಿನಲ್ಲಿ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯನ್ನು ಆರಂಭಿಸಿದರು. ಆಗೆಲ್ಲಾ ಇಡೀ ದೇಶದಲ್ಲಿಯೇ ಇದು ಪ್ರತಿಷ್ಠಿತ ಹಾಗೂ ಶ್ರವಣ, ವಾಕ್ ಸಮಸ್ಯೆ ಪತ್ತೆ, ಚಿಕಿತ್ಸೆ ಹಾಗೂ ಶಿಕ್ಷಣಕ್ಕೆ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಈಗ ಈ ವಲಯದಲ್ಲಿ ಹಲವು ಸಂಸ್ಥೆಗಳು ದೇಶದಾದ್ಯಂತ ಕೆಲಸ ಮಾಡುತ್ತಿದೆ. ಈಗ ಸರ್ವೋದಯ ಶಿಕ್ಷಣ ಸಂಸ್ಥೆ ಕೂಡ ಪದವಿ ಕೋರ್ಸ್‍ ಆರಂಭಿಸುತ್ತಿರುವುದು ಒಳ್ಖೆಯ ಬೆಳವಣಿಗೆ ಎಂದು ಹೇಳಿದರು.

೨೧ ರೀತಿಯಲ್ಲಿ ಸಮಸ್ಯೆ ಇರುವ ಅಂಗವಿಕಲರು ಹಾಗೂ ಶ್ರವಣ ದೋಷವುಳ್ಳ ೧೨ ರೀತಿಯವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಭಾರತೀಯ ಪುನರ್ವಸತಿ ಮಂಡಳಿ ಮಾಡಿದೆ. ಈ ಶಿಕ್ಷಣ ಪಡೆದು ಮುಂದೆ ವೃತ್ತಿ ಆಯ್ಕೆ ಮಾಡುವವರಿಗೆ ಬದ್ದತೆ ಹಾಗೂ ಸಮರ್ಪಣಾ ಮನೋಭಾವ ಬೇಕಾಗುತ್ತದೆ. ಆತಂಕದೊAದಿಗೆ ಬರುವ ರೋಗಿಗಳು, ಮಕ್ಕಳೊಂದಿಗೆ ಆಗಮಿಸುವ ಪೋಷಕರ ಮುಖದಲ್ಲಿ ನಗು ಮೂಡಿಸುವ ಹೊಣೆಗಾರಿಕೆ ನಿಮ್ಮ ಮೇಲೆ ಇರುತ್ತದೆ. ನೊಂದು ಬಂದವರಿಗೆ ಚಿಕಿತ್ಸೆ ನೀಡಿ ಸಾಂತ್ವನ ಹೇಳುವ ಮಾತೃಹೃದಯ ನಿಮ್ಮಲ್ಲಿ ಇರಬೇಕಾಗುತ್ತದೆ. ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಿಸುವ, ಭರವಸೆ ಮೂಡಿಸುವ ಹೊಣೆಗಾರಿಕೆ ಇರುವುದರಿಂದ ವಾಕ್ ಮತ್ತು ಶ್ರವಣ ಕೋರ್ಸ್‍ ಮುಗಿಸುವವರು ಈ ಬಗ್ಗೆ ಗಮನ ನೀಡಬೇಕಾಗುತ್ತದೆ.

ಯಾವುದೇ ವ್ಯಕ್ತಿಯ ಬದುಕಿನಲ್ಲಿ ಗುರುವಿನ ಪ್ರೇರಣೆ ಇಲ್ಲದೇ ಏನನ್ನೂ ಸಾಧಿಸಲಾಗದು. ನಾನು ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಈ ಹಂತಕ್ಕೆ ಬೆಳೆದಿರುವುದರ ಹಿಂದೆ ಡಾ.ಜಯರಾಂ ಅವರ ಪಾತ್ರವೂ ಇದೆ. 2000 ರಿಂದ 2006 ರವರೆಗೆ ಅವರು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಬದಲಾವಣೆಗೆ ನಾಂದಿ ಹಾಡಿದ ಆ ಸುವರ್ಣ ಕಾಲವನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಮುಂದೆ ನಿಂತು ಮಾತನಾಡುವ ಮಟ್ಟಕ್ಕೆ ಬೆಳೆದಿರುವುದರಿಂದ ಹಿಂದೆ ಜಯರಾಂ ಅವರ ಪ್ರೇರಣಾ ಶಕ್ತಿ ಸದಾ ಇರುತ್ತದೆ ಎಂದು ಹೇಳಿದರು.

ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ನಿವೃತ್ತ ರಿಜಿಸ್ಟಾçರ್ ಹಾಗೂ ನ್ಯೂರೋ ಫಿಸಿಯಾಲಜಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಬಿ.ಎಸ್.ಶಂಕರನಾರಾಯಣರಾವ್ ಮಾತನಾಡಿ, ಮೈ|ಸೂರು ಮಹಾರಾಜರು ೧೭೮ ವರ್ಷಗಳ ಹಿಂದೆಯೇ ನಿಮ್ಹಾನ್ಸ್ ನಂತಹ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. ಅದೇ ರೀತಿ ವಾಕ್ ಮತ್ತು ಶ್ರವಣ ಸಂಸ್ಥೆಯೂ ಮೈಸೂರಿನಲ್ಲಿ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಎರಡೂ ಸಂಸ್ಥೆಗಳು ನೀಡುತ್ತಿರುವ ಸೇವೆ ಅನುಪಮವಾದದ್ದು. ಇದರಿಂದ ಲಕ್ಷಾಂತರ ಜನರ ಬಾಳಿಗೆ ನೆಮ್ಮದಿ ನೀಡುವ ಕೆಲಸ ಸಂಸ್ಥೆಗಳಿAದ ಆಗಿದೆ ಎಂದರು.

ಸರ್ಕಾರವೇ ಎಲ್ಲಾ ವಲಯದಲ್ಲೂ ಹೆಚ್ಚು ತೊಡಗಿಸಿಕೊಳ್ಳಲು ಆಗುವುದಿಲ್ಲ. ವಾಕ್ ಮತ್ತು ಶ್ರವಣದಂತಹ ವಿಶೇಷ ನೈಪುಣ್ಯತೆ ಬೇಡುವ ಶಿಕ್ಷಣಕ್ಕೆ ಸಮಸ್ಯೆಗಳ ಇರುವವರ ಬದುಕಿನಲ್ಲಿ ಬದಲಾವಣೆ ಮಾಡಬಲ್ಲ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬಲ್ಲೆ ಎಂದು ಯೋಚಿಸುವವರು ಬರಬೇಕು. ರೋಗಿಯ ಆರೈಕೆ ಜತೆಗೆ ಶಿಕ್ಷಣಕ್ಕೂ ಒತ್ತು ನೀಡುವ ಹಲವು ಖಾಸಗಿ ಸಂಸ್ಥೆöಗಳು ಈಗ ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣದ ಜತೆಗೆ ಯುವ ಸಮೂಹಕ್ಕೆ ಕೌಶಲ್ಯ ಭರಿತ ಶಿಕ್ಷಣ ನೀಡುವುದು ಸವಾಲಿನ ಕೆಲಸವೇ ಸರಿ. ಅದರಲ್ಲೂ ಭಾರತದಲ್ಲಿ ವಾಕ್ ಮತ್ತು ಶ್ರವಣ ತಜ್ಞರ ಕೊರತೆ ಇದೆ. ಸಮಸ್ಯೆ ಇರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವರಿಗೆ ಚಿಕಿತ್ಸೆ, ಮಾರ್ಗದರ್ಶನ ನೀಡಲು ಈ ಕ್ಷೇತ್ರದಲ್ಲಿ ವಿಪುಲ ಉದ್ಯೋಗದ ಅವಕಾಶಗಳಿವೆ. ಮಾತನಾಡಲು ಬಾರದ, ಕೇಳಿಸಿಕೊಳ್ಳಲು ಆಗದವರ ಜತೆಯಲ್ಲಿ ನೀವು ಸಂವಹನ ಮಾಡಿ ಅವರ ಬದುಕಿನಲ್ಲಿ ಗಣನೀಯ ಬದಲಾವಣೆಗೆ ನಿಮ್ಮ ಕೊಡುಗೆ ದೊಡ್ಡದು. ಸರ್ವೋದಯ ಶಿಕ್ಷಣ  ಟ್ರಸ್ಟ್ ವಾಕ್ ಮತ್ತು ಶ್ರವಣ ಕೋರ್ಸ್‍ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶುಭ ಹಾರೈಸಿದರು.

ಡಾ.ಎಂ.ಜಯರಾಂ ಅವರದ್ದು ವಾಕ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅಪರಿಮಿತ ಸಂಖ್ಯೆಯ ಶಿಷ್ಯರು, ತಜ್ಞರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಅವರು ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ತಂದ ಕ್ರಾಂತಿಕಾರಿಕ ಬದಲಾವಣೆ, ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯಲ್ಲಿ ಮಾಡಿದ ಪ್ರಯೋಗ ಹಾಗೂ ಸೇವೆ, ಕೋಲಾರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ನಿರ್ಮಿಸಿದ ಫೈವ್ ಸ್ಟಾರ್ ಸೌಲಭ್ಯದ ವಾಕ್ ಮತ್ತು ಶ್ರವಣ ಶಿಕ್ಷಣ ಸಂಸ್ಥೆ ನಿಜಕ್ಕೂ ಅವರೊಬ್ಬ ಬರೀ ಶಿಕ್ಷಣ ತಜ್ಞರಲ್ಲ. ನಾಯಕತ್ವದ ಗುಣ ಇರುವಂತರು. ನಿವೃತ್ತಿ ನಂತರ ಸುಮ್ಮನೇ ಕೂರದೇ ವಾಕ್ ಮತ್ತು ಶ್ರವಣ ವಲಯದ ಉನ್ನತೀಕರಣಕ್ಕೆ ಮಾಡುತ್ತಿರುವ ಕೆಲಸ ಅಸಾಧಾರಣವಾದದ್ದು. ಈಗ ಸರ್ವೋದಯ ಶಿಕ್ಷಣ ಟ್ರಸ್ಟ್ನಲ್ಲಿ ವಾಕ್ ಮತ್ತು ಶ್ರವಣ ಪದವಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಲು ಮಾರ್ಗದರ್ಶನ  ನೀಡುತ್ತಿರುವುದು ಖಂಡಿತಾ ಬದಲಾವಣೆಗೆ ನಾಂದಿ ಹಾಡಲಿದೆ ಎಂದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಸರ್ವೋದಯ ಶಿಕ್ಷಣ ಟ್ರಸ್ಟ್ ವಾಕ್ ಮತ್ತು ಶ್ರವಣ ಸಂಸ್ಥೆಯ ಸಲಹೆಗಾರ ಡಾ.ಎಂ.ಜಯರಾA ಮಾತನಾಡಿ, ವಾಕ್ ಮತ್ತು ಶ್ರವಣ ಶಿಕ್ಷಣ ಪಡೆದು ಮುಂದೆ ವೃತ್ತಿಪರರಾಗಿ ಬೆಳೆಯಬೇಕೆಂದರೆ ಬದ್ದತೆ ಇರಲೇಬೇಕಾಗುತ್ತದೆ. ಇಂತಹ ಮನೋಭಾವ ಇದ್ದವರು ಈಗ ಈ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ. ಅದರಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕರಾಗಿರುವ ಡಾ.ಎಂ.ಪುಷ್ಪಾವತಿ, ನಿಮ್ಹಾನ್ಸ್‍ ಸಂಸ್ಥೆ ರಿಜಿಸ್ಟಾçರ್ ಆಗಿದ್ದಂತಹ ಡಾ.ಶಂಕರನಾರಾಯಣರಾವ್ ಅವರೇ ನಮ್ಮ ಮುಂದಿರುವ ಉದಾಹರಣೆ, ಇಂತಹ ಮಾದರಿಗಳಿಂದಲೇ ಈಗ ಶಿಕ್ಷಣ ಪಡೆಯಲು ಮುಂದೆ ಬರುತ್ತಿರುವವರು ಉತ್ತೇಜನ ಪಡೆಯಬೇಕು ಎಂದು ಹೇಳಿದರು.

ಡಾ.ಎಂ.ಪುಷ್ಪಾವತಿ ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಸಂಸ್ಥೆಗೆ ರಾಷ್ಟçಪತಿ, ಪ್ರಧಾನ ಮಂತ್ರಿ ಅಂತವರು ಆಗಮಿಸಿರುವುದು ನಿಜಕ್ಕೂ ಹೆಮ್ಮೆಯ ಕ್ಷಣವೇ. ಅಲ್ಲದೇ ಇಡೀ ಕೇಂದ್ರವು ಈಗ ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ಬೆಳೆದಿದೆ ಎಂದು ಮೆಚ್ಚುಗೆ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ವಿ.ನಾರಾಯಣಸ್ವಾಮಿ, ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಪದವಿಪೂರ್ವ, ಪದವಿ, ಕಾನೂನು, ನರ್ಸಿಂಗ್ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಒತ್ತು ನೀಡಿ ವಿಶಾಲವಾಗಿ ಬೆಳೆದಿದೆ. ಒಂದು ಕಾಲಕ್ಕೆ ಸರ್ವೋದಯ ಆಸ್ಪತ್ರೆಯನ್ನು ಆರಂಭಿಸಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜನರಿಗೆ ಸೇವೆ ನೀಡಿದೆ. ಈಗ ವಾಕ್ ಮತ್ತು ಶ್ರವಣ ಸಂಸ್ಥೆ ಶಿಕ್ಷಣ ಆರಂಭಿಸಿ ಪದವಿ ಕೋರ್ಸ್‍ ಕೂಡ ಆರಂಭಿಸುತ್ತಿದೆ ಎಂದು ಹೇಳಿದರು.

ಡಾ.ಎಂ.ಜಯರಾಂ ಅವರು ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಇರುವ ಅಸಾಧಾರಣ ವ್ಯಕ್ತಿ ಎನ್ನುವುದು ಅವರೊಂದಿಗೆ ಈಗ ಒಡನಾಡುತ್ತಿರುವಾಗ ಅನ್ನಿಸುತ್ತದೆ. ವಾಕ್ ಮತ್ತು ಶ್ರವಣ ಸಂಸ್ಥೆಯನ್ನು ನಾವು ಆರಂಭಿಸಲು ಮಾರ್ಗದರ್ಶನ ನೀಡುತ್ತಿರುವುದು, ಅನುಭವ, ಹೊಂದಿರುವ ಅಪಾರ ಸಂಖ್ಯೆಯ ಶಿಷ್ಯಪಡೆಯ ಜತೆಯಲ್ಲಿ ಒಂದು ರೂ. ವೇತನವನ್ನು ಪಡೆಯದೇ ಸಂಸ್ಥೆ ಬೆಳೆಸಲು ತೋರಿಸುತ್ತಿರುವ ಬದ್ದತೆ ನಿಜಕ್ಕೂ ಗೌರವ ದಾಯಕ. ಇಂತವರ ಮಾರ್ಗದರ್ಶನ, ಸೇವೆ ಇದ್ದರೆ ಎಂತಹ ಶಿಕ್ಷಣ ಸಂಸ್ಥೆಯನ್ನಾದರೂ ಬೆಳೆಸಬಹುದು ಎಂದು ತಿಳಿಸಿದರು.

ಸರ್ವೋದಯ ಶಿಕ್ಷಣ ಟ್ರಸ್ಟ್ ವಾಕ್ ಮತ್ತು ಶ್ರವಣ ಸಂಸ್ಥೆಯ ತಜ್ಞರಾದ ಡಾ.ರಶ್ಮಿಭಟ್, ಡಾ.ಅನ್ನೆ ವರ್ಗೀಸ್, ಸಹನಾ ಮುರಳಿ ಕೃಷ್ಣ ಮತ್ತಿತರರು ಹಾಜರಿದ್ದರು.

key words: Speech and Hearing, Degree, started,  Sarvodaya Education Trust, Bangalore