ವಿವಾಹಿತ ಮಹಿಳೆ ಜೊತೆ ಅನೈತಿಕೆ ಸಂಬಂಧ: ಯುವಕನ ಬರ್ಬರ ಹತ್ಯೆ

ಚಿಕ್ಕೋಡಿ,ಸೆಪ್ಟಂಬರ್,18,2025 (www.justkannada.in):  ವಿವಾಹಿತ ಮಹಿಳೆ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಯುವಕನನ್ನ ಮಹಿಳೆಯ ಪತಿ ಹತ್ಯೆ ಮಾಡಿರುವ ಘಟನೆ ಹುಕ್ಕೇರಿಯ ಶಹಾಬಂದರ ಗ್ರಾಮದಲ್ಲಿ ನಡೆದಿದೆ.

ಶಹಾಬಂದರ  ಗ್ರಾಮದ ಮಹಾಂತೇಶ್ ಬುಕನಟ್ಟಿ (24) ಕೊಲೆಯಾದ ಯುವಕ.ಮಹಂತೇಶ್ ಮತ್ತು ವಿವಾಹಿತ ಮಹಿಳೆಯನ್ನ ಪ್ರೀತಿಸುತ್ತಿದ್ದನು. ಈ ವಿಚಾರ ಮಹಿಳೆಯ ಪತಿಗೆ ತಿಳಿದಿದ್ದು ನಂತರ ಆಕೆಯ ಪತಿ ಕೊಲೆ ಮಾಡಲು ಸಂಚು ರೂಪಿಸಿ  ಮಚ್ಚಿನಿಂದ ಕೊಚ್ಚಿ  ಮಹಾಂತೇಶ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಕೊಲೆಯಾದ ಯುವಕನನ್ನು ಯುವಕ ಕೆಲಸ ಮುಗಿಸಿ ತನ್ನ ಊರಿಗೆ ವಾಪಸ್ ಆಗಿದ್ದು ಬಸ್ ನಿಂದ ಇಳಿಯುತ್ತಿದ್ದಂತೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Key words: Young man, murdered, married woman, Chikkodi