MIT ಮೈಸೂರಿನಲ್ಲಿ ಸರ್. ಎಂ.ವಿಶ್ವೇಶ್ವರಯ್ಯ ಅವರ ವಿಶ್ವದ ಅತಿದೊಡ್ಡ ಭಾವಚಿತ್ರ ಅನಾವರಣ

ಮೈಸೂರು,ಸೆಪ್ಟಂಬರ್,17,2025 (www.justkannada.in): 2025ರ ಎಂಜಿನಿಯರ್‌ ಗಳ ದಿನದಂದು, ಎಂಐಟಿ ಮೈಸೂರಿನ ಸಿವಿಲ್ ಎಂಜಿನಿಯರಿಂಗ್ ವಿಭಾಗವು, ಬೆಂಗಳೂರಿನ ಸಾಯಿ ಕಾಡ್ಡ್ ಸಂಸ್ಥೆಯ ಸಹಯೋಗದೊಂದಿಗೆ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುವ ಐತಿಹಾಸಿಕ ಪ್ರಯತ್ನದ ಅಂಗವಾಗಿ ವಿಶ್ವದ ಅತಿದೊಡ್ಡ ಭಾವಚಿತ್ರ ಅನಾವರಣಗೊಳಿಸಿದೆ.

ಸಂಸ್ಥೆಯ  ಕ್ರೀಡಾ ಮೈದಾನದಲ್ಲಿ 80 ಮೀಟರ್ × 100 ಮೀಟರ್ (8,000 ಚದರ ಮೀಟರ್ / 86,111 ಚದರ ಅಡಿ) ಅಳತೆಯ ಸರ್ ಎಂ. ವಿಶ್ವೇಶ್ವರಯ್ಯ ಅವರ ಬೃಹತ್ ಭಾವಚಿತ್ರವನ್ನು ರಚಿಸಿದೆ.

ಇದು ಭಾರತದಲ್ಲಿ ಈ ರೀತಿಯ ಮೊದಲ ಪ್ರಯತ್ನವಾಗಿದೆ ಮತ್ತು ಹಿಂದಿನ ಮೈಸೂರು ರಾಜಪ್ರಭುತ್ವದ ಪ್ರಖ್ಯಾತ  ಎಂಜಿನಿಯರ್ ಮತ್ತು ಆಡಳಿತಗಾರರಿಗೆ ಒಂದು ವಿಶಿಷ್ಟ ಗೌರವವಾಗಿದೆ. ಈ ಭಾವಚಿತ್ರವನ್ನು ಮರಳು (M-ಸ್ಯಾಂಡ್), 40 ಮಿಮೀ ಒಳಗಿನ ಜಲ್ಲಿ, ನೈಲಾನ್ ದಾರ, ನಿರುಪದ್ರವ ಬಣ್ಣಗಳು ಮತ್ತು ಮಣ್ಣನ್ನು ಬಳಸಿ ತಯಾರಿಸಲಾಗಿದೆ.

Key words: Sir M. Vishweshwaraiah, MIT, Mysore