ಮೈಸೂರು,ಸೆಪ್ಟಂಬರ್,15,2025 (www.justkannada.in): ಮೈಸೂರಿನ ಪ್ರಮುಖ ವೃತ್ತವೊಂದಕ್ಕೆ (ಫೌಂಟೇನ್ ಸರ್ಕಲ್) ಮಹಾನಗರ ಪಾಲಿಕೆ ವರನಟ ಡಾ. ರಾಜ್ ಕುಮಾರ್ ಅವರ ಹೆಸರನ್ನಿಟ್ಟು ನಾಮಫಲಕವನ್ನೂ ಅಳವಡಿಸಲಾಗಿತ್ತು. ಇತ್ತೀಚೆಗೆ ಈ ನಾಮಫಲಕ ಕಣ್ಮರೆಯಾಗಿದ್ದು,ಈ ವೃತ್ತಕ್ಕೆ ಮತ್ತೊಂದು ಹೆಸರಿಡುವ ಹುನ್ನಾರ ನಡೆದಿದೆ ಎಂದು ಹೇಳಲಾಗುತ್ತಿದೆ ಎಂದು ಬಿಜೆಪಿ ಮುಖಂಡ ರಘುಕೌಟಿಲ್ಯ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಘು ಕೌಟಿಲ್ಯ, ಈ ಕೂಡಲೇ ಡಾ. ರಾಜ್ ಹೆಸರಿನ ನಾಮಫಲಕಗಳನ್ನು ಈ ವೃತ್ತದ ಸುತ್ತಲೂ ಅಳವಡಿಸಿ, ಆಗಿರುವ ಪ್ರಮಾದವನ್ನು ನಗರಪಾಲಿಕೆ ಸರಿಪಡಿಸಿಕೊಳ್ಳಲಿ. ಇಲ್ಲವಾದಲ್ಲಿ ಉದ್ದೇಶಪೂರ್ವಕವಾಗಿ ಡಾ. ರಾಜ್ ಕುಮಾರ್ ಅವರನ್ನು ಅಪಮಾನಿಸಲೆಂದೇ ಈ ನಾಮಫಲಕವನ್ನು ನಾಮಾವಶೇಷಗೊಳಿಸಲಾಗಿದೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.
‘ಕನ್ನಡ-ರಾಜ್ ‘ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಡಾ. ರಾಜ್ ಅವರಿಗೆ ಆಗುವ ಅಪಮಾನ ಕನ್ನಡಕ್ಕಾಗುವ ಅಪಮಾನವಲ್ಲದೇ ಬೇರೇನೂ ಅಲ್ಲ. ಮತ್ತೆ ,ಮತ್ತೆ ವಿವಾದಗಳನ್ನು ಹುಟ್ಟು ಹಾಕುವುದು ಕಾಂಗ್ರೆಸ್ ಸರ್ಕಾರದ ಚಾಳಿಯಾಗಿದೆ. ಈ ಕೂಡಲೇ ಮಹಾನಗರ ಪಾಲಿಕೆ ಅಣ್ಣಾವ್ರ ನಾಮಫಲಕ ಅಳವಡಿಸಿ ಕನ್ನಡಿಗರ ಕ್ಷಮೆ ಯಾಚಿಸಲಿ ಎಂದು ಒತ್ತಾಯಿಸುವೆ ಎಂದು ರಘು ಕೌಟಿಲ್ಯ ಟ್ವಿಟ್ ಮಾಡಿದ್ದಾರೆ.
Key words: Actor, Dr. Rajkumar, nameplate, Mysore, Raghu Kautilya