ಮದ್ದೂರಿನಲ್ಲಿ 28 ಗಣೇಶಮೂರ್ತಿ ಸಾಮೂಹಿಕ ವಿಸರ್ಜನೆ ಮೆರವಣಿಗೆ: ಪೊಲೀಸ್ ಬಿಗಿ ಭದ್ರತೆ

ಮಂಡ್ಯ,ಸೆಪ್ಟಂಬರ್,10,2025 (www.justkannada.in):  ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಘಟನೆ ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ, ಗಲಭೆ  ಬೆನ್ನಲ್ಲೆ ಇದೀಗ ಇಂದು ಮದ್ದೂರಿನಲ್ಲಿ 28 ಗಣೇಶಮೂರ್ತಿಗಳನ್ನ ಮೆರವಣಿಗೆ ಮೂಲಕ ಸಾಮೂಹಿಕ ವಿಸರ್ಜನೆ ಮಾಡಲಾಗುತ್ತಿದೆ.

ಮದ್ದೂರಿನಲ್ಲಿ ಐಬಿ ಸರ್ಕಲ್, ಪೇಟೆ ಬೀದಿ ಕೊಲ್ಲಿ ಸರ್ಕಲ್ ನಿಂದ ಶಿಂಷಾ ನದಿವರೆಗೆ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿದೆ. ಹಿಂದೂ ಸಂಘಟನೆ ಬಿಜೆಪಿ ಜೆಡಿಎಸ್   ವತಿಯಿಂದ ಮೆರವಣಿಗೆ ನಡೆಯುತ್ತಿದ್ದು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸಾಕಷ್ಟು ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಈ ಮಧ್ಯೆ  ಬಿಜೆಪಿ ಸತ್ಯಶೋಧನಾ ಸಮಿತಿ ಮದ್ದೂರಿಗೆ ಭೇಟಿ ನೀಡಿದ್ದು ಘಟನೆಗೆ ಕಾರಣ ಏನು ಎಂಬ ಬಗ್ಗೆ ಮಾಹಿತಿ ಪಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಮದ್ದೂರಿಗೆ ಆಗಮಿಸಿದ್ದಾರೆ.

Key words: Ganesha, immersion,  procession, Maddur, Tight, police, security