ಮೈಸೂರು,ಸೆಪ್ಟಂಬರ್,3,2025 (www.justkannada.in): ಒಡನಾಡಿ ಸಂಸ್ಥೆಗೆ ಯಾವುದೇ ಇಡಿ ದಾಳಿ ಆಗಿಲ್ಲ. ನಮಗೆ ಯಾರೂ ನೋಟಿಸ್ ಕೂಡ ನೀಡಿಲ್ಲ. ಒಂದು ವೇಳೆ ಕೊಟ್ಟರೆ ನಾವು ಪಟಾಕಿ ಹೊಡೆದು ಸಂಭ್ರಮದಿಂದ ಬರಮಾಡಿಕೊಳ್ಳುತ್ತೇವೆ ಎಂದು ಒಡನಾಡಿ ಸಂಸ್ಥೆಯ ಪರಶುರಾಮ್ ಹೇಳಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಪರಶುರಾಮ್, ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಸಂಬಂಧ, ನಾನು ಆ ಕ್ಷೇತ್ರವನ್ನ ಅಗಾದವಾಗಿ ಪ್ರೀತಿಸುವೆ. ಅದು ನನ್ನ ದೇವರು. ಆ ದೇವಸ್ಥಾನಕ್ಕೆ ನಮ್ಮವ್ವ ಕಾಯಿ, ಹಲಸಿನಹಣ್ಣು ಕೊಟ್ಟಿದ್ದಾಳೆ. ಆ ಕ್ಷೇತ್ರಕ್ಕೆ ಅಪಪ್ರಚಾರ ಮಾಡಲು ನಾನು ಬಿಡಲ್ಲ. ಇಡಿ ಬಂದರೆ ನಾವು ಸಂಭ್ರಮದಿಂದ ಬರಮಾಡಿಕೊಳ್ಳುತ್ತೇವೆ. ಕ್ರಿಸ್ತ ಮಿಷನರಿಗಳು ಯಾರು ನಮಗೆ ಗೊತ್ತಿಲ್ಲ. ಕ್ರಿಸ್ತ ಮಿಷನರಿಗಳು ಕ್ರಿಸ್ತರಿಗೆ ಕೊಡದೆ ನಮಗ್ಯಾಕೆ ಹಣ ಕೊಡುತ್ತಾರೆ? ಒಡನಾಡಿ ಸಂಸ್ಥೆ ಕ್ರೈಸ್ತ ಸಂಸ್ಥೆಯಲ್ಲ. ಇದು ಶೇ.99 ರಷ್ಟು ಕೆಲಸ ಮಾಡುವವರು ಹಿಂದುಗಳು. ಕೆಲಸ ಮಾಡುವ ಎಲ್ಲರೂ ಕೂಡ ಹಿಂದುಗಳೇ..! ನಾನು ಬೊಗಳೆ ಬಿಡುವ ಹಿಂದುವಲ್ಲ. ನಾನು ಒಬ್ಬ ಪರಮಹಿಂದೂ ಭಕ್ತ. ಸ್ಟ್ಯಾನ್ಲಿ ಒಬ್ಬರು ಕ್ರೈಸ್ತ ಇರುವ ಕಾರಣಕ್ಕೆ ಇದು ಕ್ರೈಸ್ತ ಸಂಸ್ಥೆಯಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ನೊಂದವರ ಪರವಾಗಿ ಸಂಸ್ಥೆ ಕಟ್ಟುತ್ತಿದ್ದೇವೆ. ಹಾಳು ಮಾಡಲು ಫಾರಿನ್ ಫಂಡ್ ಯಾರಾದರೂ ಕೊಡ್ತಾರಾ? ಫ್ರಿ ಎ ಗರ್ಲ್ ಎಂಬ ಸಂಸ್ಥೆ ಇಂಟರ್ ನ್ಯಾಷನಲ್ ಅಲ್ಲಿ ಓಟಿಂಗ್ ಮಾಡುತ್ತಾರೆ. ಅಲ್ಲಿ ದೊಡ್ಡ ಮೊತ್ತದ ಅವಾರ್ಡ್ ಮಾಡುತ್ತದೆ. ಒಡನಾಡಿ ಹೆಸರಿನಲ್ಲಿ ಅಮೇರಿಕಾ, ಇಂಗ್ಲೆಂಡ್ ಎಲ್ಲಾ ದೇಶ ಕೊಡುತ್ತಾರೆ. ನಾವು ಬಟ್ಟೆಗಳನ್ನ ಮಾರುತ್ತೇವೆ. ಅದರಿಂದ ಫಾರಿನ್ ಫಂಡ್ ಬರುತ್ತಿದೆ. ಒಂದೇ ಒಂದು ರೂಪಾಯಿ ದುರ್ಬಳಕೆ ಆಗಿದ್ದರೂ ಯಾವ ತನಿಖೆಗೂ ಸಿದ್ಧ ಎಂದು ಪರಶುರಾಮ್ ಹೇಳಿದರು.
ಫಾರಿನ್ ಕಾಂಟ್ರುಬ್ಯೂಷನ್ ರಿಜಿಸ್ಟ್ರೇಡ್ ( FRRA) ಆಕ್ಟ್ ಇದೆ. ಅದನ್ನ ನಿರ್ವಹಣೆ ಮಾಡುವುದು ಕೇಂದ್ರ ಗೃಹಸಚಿವರು. ಅಂತಹ ದುರ್ಬಲ ಸಂಸ್ಥೆಯಾಗಿದ್ದರೆ ಅದನ್ನ ಯಾಕೆ ಬೆಳೆಯಲು ಬಿಡುತ್ತಿದ್ದರು. ಒಡನಾಡಿ ಸಂಸ್ಥೆ ಮಹಿಳೆಗೆ ಸಹಾಯ ಮಾಡಲು ಮುಂದಾಗಿದೆ. ಪ್ರತ್ಯಕ್ಷ ದರ್ಶಿ ಏನೋ ಹೇಳುತ್ತಿದ್ದಾಳೆ. ಕೇಳಿಸಿಕೊಳ್ಳುವ ತಾಳ್ಮೆ ಯಾರಿಗೂ ಇಲ್ಲ. ಸಾಕ್ಷಿಯನ್ನ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಆಕೆ ಸುಳ್ಳು ಹೇಳುತ್ತಿದ್ದರೆ ನೇಣಿಗೆ ಹಾಕಿ. ಆಕೆಯನ್ನ ಕರೆ ತಂದಿದ್ದಕ್ಕೆ ನಾವು ಟಾರ್ಗೆಟ್ ಆಗಿದ್ದೇವೆ. ಕಾನೂನು ಕ್ರಮ ತೆಗೆದುಕೊಳ್ತಾರೆ ಅಂತ ನಡುಕ ಹುಟ್ಟಿದೆ. ನಾನು ಜಾತ್ಯಾತೀತರು, ಧರ್ಮಾತೀತರು. ನಾವು ಯಾವುದೇ ತನಿಖೆಗೆ ಸಿದ್ಧ. ಸಂಭ್ರಮದಿಂದ ಎಲ್ಲವನ್ನೂ ಸ್ವಾಗತಿಸುತ್ತೇವೆ. ನಾವು ಇದನ್ನ ಎಂದೆಂದಿಗೂ ಸಂಭ್ರಮಿಸುತ್ತೇವೆ ಎಂದು ಒಡನಾಡಿ ಪರಶುರಾಮ್ ಹೇಳಿದರು.
Key words: no, ED, raid , Odanadi, organization, Parashuram