ಎಸ್ ಐಟಿ ತನಿಖೆ ಒಪ್ಪಿಕೊಂಡಿದ್ದ ಬಿಜೆಪಿ ಈಗ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡ್ತಿದ್ದಾರೆ- ಸಚಿವ ಸಂತೋಷ್ ಲಾಡ್

ಬೆಂಗಳೂರು,ಆಗಸ್ಟ್,29,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐ ಟಿ ತನಿಖೆಯನ್ನು ಅಂದು ಸ್ವಾಗತಿಸಿದ್ದ ಬಿಜೆಪಿ ಇದೀಗ ವಿರೋಧ ಮಾಡುತ್ತಿರುವುದು ಏಕೆ? ಎಸ್ ಐಟಿ ತನಿಖೆ ಒಪ್ಪಿಕೊಂಡಿದ್ದ ಬಿಜೆಪಿ ಈಗ ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡ್ತಿದ್ದಾರೆ  ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್ ಲಾಡ್,  ಎಸ್ ಐಟಿಗೆ ಸ್ವಾಗತ ಮಾಡಿದ್ದು ಇವರೇ, ಇದೀಗ ಪ್ರತಿಭಟನೆ ನಡೆಸುವುದಾದರೆ ಅಂದು ಎಸ್ ಐಟಿ ತನಿಖೆಯನ್ನು ಯಾಕೆ ಸ್ವಾಗತ‌ಮಾಡಿದರು. ರಾತ್ರೋರಾತ್ರಿ ಯಾರೋ ಒಬ್ಬ ವ್ಯಕ್ತಿ ಬಂದು ಕೆಲವೊಂದು ಆರೋಪಗಳನ್ನು ಮಾಡುತ್ತಾನೆ. ಈ ವಿಚಾರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಿದೆ. ಆದರೆ ಎಸ್ ಐಟಿ ತನಿಖೆಯನ್ನು ಒಪ್ಪಿಕೊಂಡಿದ್ದ ಬಿಜೆಪಿ ನಾಯಕರು ಇದೀಗ ರಾಜಕೀಯ ಲಾಭಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಸಂಸತ್ ಭವನ ಉದ್ಘಾಟನೆಯ ವೇಳೆ ರಾಷ್ಟ್ರಪತಿ ದ್ರೌಪತಿ ಮುರ್ಮಾ ಅವರನ್ನು ಏಕೆ ಕರೆದೊಯ್ಯಲಿಲ್ಲ? ಶಿಷ್ಠಾಚಾರದ ಪ್ರಕಾರ ಅವರು ಮುಂದೆ ಇರಬೇಕಿತ್ತು ಅಲ್ಲವೇ? ಅವರು  ಎಸ್ ಟಿ ಸಮುದಾಯಕ್ಕೆ ಸೇರಿದವರು ಅಂತಾಲೋ, ವಿಧವೆ ಅಂತ ಕರೆದೊಯ್ಯಲಿಲ್ವಾ?ಯಾಕೆ ಅವರನ್ನ ಕರೆದೊಯ್ಯಲಿಲ್ಲ ಎಂದು  ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರು. ಆಗ ಮುಸ್ಲಿಂ ಅನ್ನೋ ಪದ ಬರಲಿಲ್ವಾ? ಹಿಂದೂಗಳ ಬಗ್ಗೆ ಮಾತನಾಡ್ತಾರೆ. ರಾಮಮಂದಿರ ಜನರ ದುಡ್ಡಿನಿಂದ ಕಟ್ಟಿದ್ದು. ಇವರ ಹಣದಲ್ಲಿ ಅದನ್ನ ಕಟ್ಟಿದ್ದಾರಾ? ಎಂದು  ಸಚಿವ ಸಂತೋಷ್ ಲಾಡ್ ಟಾಂಗ್ ಕೊಟ್ಟರು.

Key words: BJP, SIT, probe, political, Minister, Santosh Lad