ನಾನು ಸತ್ಯಗಳನ್ನ ಹೇಳಿದ್ರೆ ಕೆಲವರು ಸಹಿಸುವುದಿಲ್ಲ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,28,2025 (www.justkannada.in):  ನಾನು ಏನೇ ಸತ್ಯಗಳನ್ನ ಹೇಳಿದರೂ ಕೆಲವರು ಸಹಿಸುವುದಿಲ್ಲ. ಹೀಗಾಗಿ ನಾನು ಮಾತನಾಡದಿರುವುದೇ ಉತ್ತಮ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಸದನದಲ್ಲಿ ಸೇರಿದಂತೆ ಎಲ್ಲಿ ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ  ಬೇರೆಯವರ ಕೆಲಸವಾಗಿದೆ. ರಾಜಕೀಯದವರು, ಪ್ರಮೋದಾ ದೇವಿ ಅವರು ಇರಬಹುದು, ಸಂಸದ ಯದುವೀರ್ ಇರಬಹುದು. ಅಸೆಂಬ್ಲಿಯಲ್ಲಿ ಏನು ಹೇಳಿದರೂ ತಪ್ಪು ಕಂಡು ಹಿಡಿಯುತ್ತಾರೆ.

ನಮ್ಮ ವಕ್ತಾರರು ಇದ್ದಾರೆ. ಬೇರೆ ನಾಯಕರು ಇದ್ದಾರೆ ಅವರನ್ನ ಕೇಳಿ  ಏನೋ ನಡೆಯುತ್ತಿದೆ. ನಾನು ಮಾತನಾಡುವುದಿಲ್ಲ. ನಾನು ಮಾತನಾಡದಿರುವುದೇ ಲೇಸು ಅನಿಸುತ್ತದೆ. ಈ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಬೇರೆ ನಾಯಕರು ಹಾಗೂ ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಮಾತನಾಡಿ ಎಂದು ಹೇಳಿದರು.

Key words: telling, truth, DCM, DK Shivakumar