ಬೆಂಗಳೂರು,ಆಗಸ್ಟ್,21,2025 (www.justkannada.in): ರಾಜ್ಯದಲ್ಲಿ ಈ ಸರ್ಕಾರದ ಆಡಳಿತದಲ್ಲಿ ಅನುದಾನ ಇಲ್ಲದೆ ಶಾಸಕರು ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ಎರಡು ವರ್ಷ ಬೋಗಸ್ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಟೀಕಿಸಿದರು.
ವಿಧಾನಸಭೆಯಲ್ಲಿ ನಿಯಮ 69 ರಡಿಯಲ್ಲಿ ಅನುದಾನದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಈ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧ ಕೆಲಸ ಆಗಿಲ್ಲ. ರಸ್ತೆಗೆ ಮಣ್ಣು ಹಾಕಲೂ ಈ ಸರ್ಕಾರ ಹಣ ಕೊಟ್ಟಿಲ್ಲ. ಒಂದೇ ಒಂದು ಕಿ.ಮೀ ಹೊಸ ರಸ್ತೆ ನಿರ್ಮಾಣ ಆಗಿಲ್ಲ. ಅನುದಾನವನ್ನ ಯಾರಿಂದ ಕೊಡಿಸುತ್ತೀರಿ ಗ್ರಾಮಾಂತರ ಭಾಗದ ರಸ್ತೆಗಳ ಕಥೆ ಹೇಳೋಕೆ ಆಗುವುದಿಲ್ಲ ರಸ್ತೆಯಲ್ಲಿ ಗುಂಡಿ ಹುಡುಕಬೇಕೋ ಗುಂಡಿಯಲ್ಲಿ ರಸ್ತೆ ಹುಡುಕಬೇಕೋ ಗೊತ್ತಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಈ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ಸು ಫ್ರಮ್ ಸೋ ಸಿನಿಮಾ ಪ್ರಸಿದ್ದವಾಗಿದೆ. ಆದರೆ ನಾನು ಈ ಸರ್ಕಾರವನ್ನು ಬಿ ಫ್ರಮ್ ಸಿ ಎಂದು ಹೇಳುತ್ತೇನೆ. ಬೋಗಸ್ ಫ್ರಮ್ ಕಾಂಗ್ರೆಸ್. ಕಳೆದ ಎರಡು ವರ್ಷದಲ್ಲಿ ಬೋಗಸ್ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಟೀಕೆ ಮಾಡಿದರು.
Key words: Session, grant, Discussion, BJP, MLA, Sunil kumar