ಕಲಬುರಗಿ,ಆಗಸ್ಟ್,20,2025 (www.justkannada.in): ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪರೀಕ್ಷೆ ವಿಭಾಗ, ಹಲವು ಕೊಠಡಿಗಳಿಗೆ ಭೇಟಿ ನೀಡಿದ ಲೋಕಾಯುಕ್ತ ಎಸ್ಪಿ.ಸಿದ್ದರಾಜು ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬಳಿ ಸಮಸ್ಯೆ ಆಲಿಸಿದರು ಮಾರ್ಕ್ಸ್ ಕಾರ್ಡ್ ಇನ್ನೂ ನೀಡದ ಬಗ್ಗೆ ಮತ್ತು ತಮ್ಮ ಸಮಸ್ಯೆಗಳ ಯಾರು ಸ್ಪಂದನೆ ನೀಡದ ಬಗ್ಗೆ ವಿದ್ಯಾರ್ಥಿಗಳು ಹೇಳಿಕೊಂಡರು.
ನಂತರ ಮೌಲ್ಯಮಾಪನ ರಿಜಿಸ್ಟರ್ ಕಣ್ಣೂರ್ ಅವರಿಗೆ ಯಾವುದೇ ವಿದ್ಯಾರ್ಥಿಗಳು ತೊಂದರೆ ಆಗದಂತೆ ಅವರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ನೀಡಿ ಎಂದು ಲೋಕಾಯುಕ್ತ ಎಸ್ಪಿ ಸಿದ್ದರಾಜು ಸೂಚನೆ ನೀಡಿದರು.
Key words: Lokayukta SP, visit, Gulbarga University