ಧರ್ಮಸ್ಥಳ ಕೇಸ್: ಡಾ. ವೀರೇಂದ್ರ ಹೆಗಡೆ ಮೊದಲ ಪ್ರತಿಕ್ರಿಯೆ ಏನು..?

ಧರ್ಮಸ್ಥಳ,ಆಗಸ್ಟ್,19,2025 (www.justkannada.in):  ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಪ್ರಕರಣ, ಶವ ಶೋಧಕಾರ್ಯ ವಿಚಾರಕ್ಕೆ ಸಂಬಂಧಿಸಿದಂತೆ  ಡಾ.ವೀರೇಂದ್ರ ಹೆಗಡೆ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ವೀರೇಂದ್ರ ಹೆಗಡೆ, ಧರ್ಮಸ್ಥಳದ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಠಿಸಲಾಗುತ್ತಿದೆ.  ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ತರಾವರಿಯಾಗಿ ಸುದ್ದಿ ಪ್ರಕಟಿಸಲಾಗುತ್ತಿದೆ.  ಎಸ್ ಐಟಿ ತನಿಖೆ’ಯಿಂದ ಸತ್ಯ ಹೊರ ಬರಲಿದೆ ಎಂದಿದ್ದಾರೆ.

ಎಸ್‌ಐಟಿ ಬಗ್ಗೆ ನನಗೆ ನಂಬಿಕೆಯಿದೆ. ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ಸತ್ಯವನ್ನು ಹೊರ ತರಲಿದೆ. ಸಿಬಿಐ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಎಂದು ಡಾ.ವೀರೇಂದ್ರ ಹೆಗಡೆಯವರು ತಿಳಿಸಿದ್ದಾರೆ.

Key words: Dharmasthala Case, Dr. Veerendra Hegde, first,  reaction