ಬೆಂಗಳೂರು,ಆಗಸ್ಟ್,19,2025 (www.justkannada.in): ಸಿಎಂ ಸಿದ್ದರಾಮಯ್ಯ ಬಗ್ಗೆ ಹೇಳಿಕೆ ಸಂಬಂಧ ಮಹೇಶ್ ತಿಮರೋಡಿ ವಿರುದ್ದ ಪ್ರಕರಣ ದಾಖಲಿಸಿ ಬಂಧನಕ್ಕೆ ಆಗ್ರಹ ಕೇಳಿಬಂದಿರುವ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ತಿಮರೋಡಿ ಒಂದ ಮಾತು ಅಂದ್ರು ಅಂತಾ ಕೇಸ್ ಹಾಕಲು ಆಗಲ್ಲ . ಪೊಲೀಸ್ ಕೇಸ್ ಹಾಕಿ ಅವರನ್ನ ಬಂಧಿಸಲು ಹೋಗಲ್ಲ. 2023 ರಲ್ಲಿ ಹರೀಶ್ ಪೂಂಜಾ ತಿಮರೋಡಿ ಹೇಳಿಕೆ ನೀಡಿದ್ದರು. ಪ್ರಕರಣ ಕೂಡ ರಿಜಿಸ್ಟರ್ ಆಗಿತ್ತು. ಆದರೆ ತಡೆಯಾಜ್ಞೆ ಸಿಕ್ಕಿದೆ. ತಡೆಯಾಜ್ಞೆ ತೆರುವು ಆದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಧರ್ಮಸ್ಥಳದ ಬಗ್ಗೆ ಮಧ್ಯಂತರ ವರದಿ ಬೇಗ ಬರುತ್ತೆ ಆದರೆ ಈಗಲೇ ಬರುತ್ತದೆ ಎಂದು ಹೇಳಲು ಆಗಲ್ಲ. ಧರ್ಮಸ್ಥಳ ವಿಚಾರವಾಗಿ ಸದನದಲ್ಲಿ ನಿನ್ನೆ ಉತ್ತರ ನೀಡಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
Key words: not, file , case , Timarodi, Home Minister, Dr. G. Parameshwar