ಬೆಂಗಳೂರು,ಆಗಸ್ಟ್,18,2025 (www.justkannada.in): ಕಾಂಗ್ರೆಸ್ ಧರ್ಮಸ್ಥಳದ ಪರವಾಗಿದೆ. ಸಿಎಂ ಸಿದ್ದರಾಮಯ್ಯ ಮೇಲೆ ಕೊಲೆ ಆರೋಪ ಮಾಡಿದವನ ಸತ್ಯವನ್ನೂ ಹೊರಗೆ ತರುತ್ತೇವೆ ಎಂದು ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ತಿಳಿಸಿದರು.
ಇಂದು ಸದನದಲ್ಲಿ ಧರ್ಮಸ್ಥಳದ ಪ್ರಕರಣ ಚರ್ಚೆಯಾಗಿದ್ದು, ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿದರು. ಈ ಮಧ್ಯೆ ಸಿಎಂ ಸಿದ್ದರಾಮಯ್ಯ 24 ಕೊಲೆಗಳನ್ನ ಮಾಡಿದ್ದಾರೆ ಎಂದು ಮಹೇಶ್ ತಿಮರೋಡಿ ನೀಡಿದ್ದ ಹೇಳಿಕೆ ಕುರಿತೂ ಭಾರಿ ಚರ್ಚೆಯಾಯಿತು.
ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಂ ಶಿವಲಿಂಗೇಗೌಡರು, ಸಿಎಂ ಸಿದ್ದರಾಮಯ್ಯ ಮೇಲೆ ಕೊಲೆ ಆರೋಪ ಮಾಡಿದ್ದಾನೆ. ಅವನ ಸತ್ಯವನ್ನೂ ನಾವು ಹೊರಗೆ ತರುತ್ತೇವೆ. ವರದಿ ಕೊಡವವರೆಗೆ ಸುಮ್ಮನಿರಿ. ಆ ಮಂಜುನಾಥಸ್ವಾಮಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದರು.
ಇಲ್ಲಿ ಯಾರು ನಾಟಕ ಮಾಡುತ್ತಿದ್ದಾರೆ ಗೊತ್ತಾಗುತ್ತದೆ ಇರಿ. ಎಸ್ ಐಟಿಯಿಂದ ಮಾತ್ರ ಸತ್ಯಾಸತ್ಯತೆ ಹೊರಬರುತ್ತೆ. ಇದಕ್ಕೆ ನಾವು ಸಿಎಂ, ಗೃಹ ಸಚಿವರನ್ನ ಸನ್ಮಾನಿಸಬೇಕು ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
Key words: Dharmasthala case, CM Siddaramaiah, Session, MLA, KM Shivalingegowda