‘ನೀವು ಕೆಮ್ಮಿದ್ರೆ ಯಾರ್ ಯಾರಿಗೆ ಅಪಾಯ ಕಾದಿದ್ಯೋ ಗೊತ್ತಿಲ್ಲ’:  ಡಿಸಿಎಂ ಡಿಕೆಶಿ ಕಿಚಾಯಿಸಿದ ಬಿಜೆಪಿ

ಬೆಂಗಳೂರು,ಆಗಸ್ಟ್,12,2025 (www.justkannada.in):  ಇಂದು ವಿಧಾನಸಭೆ ಕಲಾಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ಕೊಡಲು ಮುಂದಾದಾಗ ಕೆಮ್ಮಿದ್ದಕ್ಕೆ ಬಿಜೆಪಿ ಸದಸ್ಯರು ಕೆಎನ್ ರಾಜಣ್ಣ ತಲೆದಂಡ ವಿಚಾರವಾಗಿ ಕಿಚಾಯಿಸಿದ ಸ್ವಾರಸ್ಯಕರ ಘಟನೆ ನಡೆಯಿತು.

ಇಂದು ಸದನದಲ್ಲಿ ಉತ್ತರ ನೀಡಲು ಮುಂದಾದಾಗ ಡಿಸಿಎಂ ಡಿಕೆ ಶಿವಕುಮಾರ್ ಕೆಮ್ಮಿದರು.   ಈ ವೇಳೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ನೀವು ಕೆಮ್ಮಿದರೇ ಯಾರ್ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ ಎಂದು ಕಾಲೆಳೆದರು. ಶಾಸಕ ಸುನೀಲ್ ಕುಮಾರ್ ಮಾತಿಗೆ ಸದನ ನಗೆಗಡಲಲ್ಲಿ ತೇಲಿತು.

ಈ ಮಧ್ಯೆ ಕೆಎನ್ ರಾಜಣ್ಣ ವಜಾ ಕುರಿತು ಸದನದಲ್ಲಿ ಹೆಚ್ .ಕೆ ಪಾಟೀಲ್ ಉತ್ತರ ನೀಡಲು ಮುಂದಾದರು. ಈ ವೇಳೆ ರಾಜೀನಾಮೆ ಬಗ್ಗೆ ಉತ್ತರ ಕೊಡಲು ಬರಲ್ಲ.  ಸಿಎಂ ಅವರೇ ಇದರ ಬಗ್ಗೆ ಉತ್ತರ ಕೊಡಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತು. ಇನ್ನು ಇದೇ ಸಂದರ್ಭದಲ್ಲಿ ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನ್ಕರ್ ರಾಜೀನಾಮೆ ಬಗ್ಗೆ ಹೆಚ್.ಕೆ ಪಾಟೀಲ್ ಪ್ರಸ್ತಾಪಿಸಿದಕ್ಕೆ,  ವಜಾ ಬೇರೆ ರಾಜೀನಾಮೆ ಬೇರೆ ಎಂದು  ಬಿಜೆಪಿ ಸದಸ್ಯರು ಕೌಂಟರ್ ಕೊಟ್ಟರು. ಈ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವ ಪ್ರಿಯಾಂಕ್  ಖರ್ಗೆ ಹೇಳಿದರು. ಇದಕ್ಕೆ ಟಾಂಗ್ ಕೊಟ್ಟ ಶಾಸಕ ಸುನೀಲ್ ಕುಮಾರ್  ಆದ್ರೆ ಇದು ಹೈಕಮಾಂಡ್ ವಿವೇಚನೆ  ಎಂದರು.

Key words:  Session,  DCM, DK Shivakumar, cough, danger, BJP