ರಾಜಣ್ಣ ವಜಾ ಖಂಡಿಸಿ ಸಿಡಿದೆದ್ದ ಬೆಂಬಲಿಗರು: ಪ್ರತಿಭಟನೆ, ಪೆಟ್ರೋಲ್ ಸುರಿದುಕೊಂಡು ಆಕ್ರೋಶ

ತುಮಕೂರು,ಆಗಸ್ಟ್,12,2025 (www.justkannada.in):  ಸಚಿವ ಸ್ಥಾನದಿಂದ  ಕೆ.ಎನ್ ರಾಜಣ್ಣರನ್ನ ವಜಾಗೊಳಿಸಿದ್ದನ್ನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಜಾ ಆದೇಶವನ್ನ ಹಿಂಪಡೆಯುವಂತೆ ಆಗ್ರಹಿಸಿ  ಮಧುಗಿರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿ  ರಸ್ತೆ ತಡೆದು ಕೆ.ಎನ್ ರಾಜಣ್ಣ ಬೆಂಬಲಿಗರು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.  ಅಲ್ಲದೆ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಹೈಡ್ರಾಮಾ ಸೃಷ್ಠಿಸಿದ್ದು ರಸ್ತೆಯಲ್ಲೇ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇನ್ನು ಕೆಎನ್ ರಾಜಣ್ಣ ವಜಾ ಖಂಡಿಸಿ ಮಧುಗಿರಿ ಪುರಸಭೆಯ 13 ಸದಸ್ಯರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಮಧುಗಿರಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ರಾಜೀನಾಮೆ ನೀಡುವುದಾಗಿ ಉಪಾಧ್ಯಕ್ಷೆ ಸುಜಾತ ಶಂಕರ್ ನಾರಾಯಣ ಬೆದರಿಕೆ ಹಾಕಿದ್ದಾರೆ.

Key words: Supporters, condemned, Rajanna, dismiss, Protest