ಕೆ.ಎನ್ ರಾಜಣ್ಣ ವಜಾ ವಿಚಾರ: ಎಚ್ಚರಿಕೆ ಗಂಟೆ ಎಂದ MLC ಬಿಕೆ ಹರಿಪ್ರಸಾದ್

ನವದೆಹಲಿ,ಆಗಸ್ಟ್,12,2025 (www.justkannada.in):  ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾಗೊಳಿಸಿರುವ ವಿಚಾರ ಸಂಬಂಧ ಮುಂದೆ ಹೀಗೆ ಆಗಬಾರದು ಅಂತಾ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಬಿಕೆ ಹರಿಪ್ರಸಾದ್,  ಕಾಂಗ್ರೆಸ್ ನಲ್ಲಿ ಹಿಂದುಳಿದ ವರ್ಗದವರು, ಪರಿಶಿಷ್ಟ ವರ್ಗದವರು ಅಂತೇನಿಲ್ಲ.  ನಾವೆಲ್ಲರೂ ಸರ್ವಧರ್ಮಿಯರು. ಕಾಂಗ್ರೆಸ್ ಪಕ್ಷ ಭೇದ ಭಾವದಿಂದ ರಾಜಕಾರಣ ಮಾಡುವುದಿಲ್ಲ.  ಜಾತಿ ಹೆಸರು ಹೇಳಿ ರಾಜಕಾರಣ ಮಾಡುವುದು ಬಿಜೆಪಿ  ಎಂದರು.

ರಾಜಣ್ಣ ಸುಮ್ಮನೇ ಕೂರುವ ವ್ಯಕ್ತಿ ಅಲ್ಲ. ಷಡ್ಯಂತ್ರ ಇರುವುದು ಸಹಜ ಇದೆಲ್ಲವನ್ನೂ ಎದುರಿಸಬೇಕು. ಮುಂದೆ ಮಾತನಾಡಿ ಸರಿಮಾಡುವ ಪ್ರಯತ್ನ ಮಾಡಲಾಗುತ್ತದೆ. ಕೆಲವು ವಿಚಾರಗಳಲ್ಲಿ ಹೈಕಮಾಡ್ ತೀರ್ಮಾನವೇ ಅಂತಿಮ ಮುಂದೆ ಹೀಗೆ ಆಗಬಾರದು ಅಂತಾ ಇದು ಎಚ್ಚರಿಕೆಯ ಗಂಟೆ ಹೈಕಮಾಂಡ್ ಕೆಲ ತೀರ್ಮಾನಗಳನ್ನ ಒಪ್ಪಬೇಕಾಗುತ್ತದೆ  ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.

Key words: KN Rajanna, dismiss, issue, MLC, BK Hariprasad