ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾ: ಸದನದಲ್ಲಿ ಚರ್ಚೆಯಾಗಲಿ- ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಆಗಸ್ಟ್,12,2025 (www.justkannada.in):   ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ಅವರನ್ನ ವಜಾಗೊಳಿಸಿದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ,  ರಾಜಣ್ಣ ಏನು ಘೋರ ಅಪರಾಧ ಮಾಡಿದ್ದರು.  ಕೇವಲ ಕಾಂಗ್ರೆಸ್ ಆಂತರಿಕ ವಿಚಾರ ಅಲ್ಲ. ರಾಜಣ್ಣ ಷಡ್ಯಂತ್ರ ಅಂತಾ ಹೇಳಿದ್ದಾರೆ. ಸದನದಲ್ಲಿ ರಾಜಣ್ಣ  ವಜಾ ಬಗ್ಗೆ ಚರ್ಚೆಯಾಗಬೇಕು ಎಂದರು.

ಈ ಕುರಿತು ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾತನಾಡಿ, ರಾಜಣ್ಣ ಯಾವ ಭ್ರಷ್ಟಾಚಾರದಲ್ಲಿ ಸಿಲುಕಿದ್ರು. ಯಾಕೆ ವಜಾ ಮಾಡಿದ್ರು ಎಂದು ಸಿಎಂ ಉತ್ತರಿಸಬೇಕು.  ಷಡ್ಯಂತ್ರ ಆಗಿದೆ ಎಂದು ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಸಿಎಂ ಉತ್ತರಿಸಬೇಕು ಸಿಎಂ ಸದನದಲ್ಲಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Key words: K.N. Rajanna, dismiss, ministerial post, BY Vijayendra