ಮುಂಬೈ,ಆಗಸ್ಟ್,9,2025 (www.justkannada.in): ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಭಾಗವಾದ ದಿ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ (HBCSE) ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ “ಕಾಸ್ಮಿಕ್ ಕ್ಯಾನ್ವಾಸ್” (Cosmic Canvas) ಶೀರ್ಷಿಕೆಯಡಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯದ ವಿದ್ಯಾರ್ಥಿನಿ ಮೇಧಾ ಉಮೇಶ್ ವಿಜೇತಳಾಗಿದ್ದಾಳೆ.
18ನೇ ಇಂಟರ್ನ್ಯಾಷನಲ್ ಒಲಿಂಪಿಯಾಡ್ ಆನ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ (IOAA)- 2025 ಆಗಸ್ಟ್ 11-21, 2025 ರವರೆಗೆ ಮುಂಬೈಯಲ್ಲಿ ಜರುಗಲಿದೆ. ಈ ನಿಮಿತ್ತವಾಗಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಭಾಗವಾದ ದಿ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ (HBCSE) ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ “ಕಾಸ್ಮಿಕ್ ಕ್ಯಾನ್ವಾಸ್” (Cosmic Canvas) ಶೀರ್ಷಿಕೆಯಡಿ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಮೇಧಾ ಉಮೇಶ್ 9-12ನೇ ತರಗತಿಯ ವರೆಗಿನ ಎರಡನೇ ವಿಭಾಗದಲ್ಲಿ ವಿಜೇತಳಾಗಿದ್ದಾಳೆ
ಅಧ್ಯಯನದಲ್ಲೂ ಮುಂಚೂಣಿಯಲ್ಲಿರುವ ಮೇಧಾ ಈ ಹಿಂದೆಯೂ ಚಿತ್ರಕಲೆ, ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆ, ಸಂಗೀತ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಅಂತರಾಷ್ಟ್ರೀಯ ರಾಷ್ಟ್ರೀಯಮಟ್ಟಗಳನ್ನೊಳಗೊಂಡಂತೆ ವಿವಿಧ ಹಂತಗಳಲ್ಲಿ 300ಕ್ಕೂ ಅಧಿಕ ಪ್ರಶಸ್ತಿಗಳನ್ನು ಗಳಿಸಿದ್ದಾಳೆ. “ಸೋದರಿ ನಿವೇದಿತಾ ಪುರಸ್ಕಾರ”, “ಶ್ರೀ ಶಂ. ಗು. ಬಿರಾದಾರ ಮತ್ತು ಭಾಸ್ಕರಾಚಾರ್ಯ ಪ್ರತಿಭಾ ಪ್ರಶಸ್ತಿ” ಹಾಗೂ “ನಚಿಕೇತಶ್ರೀ” ರಾಜ್ಯಮಟ್ಟದ ಪ್ರಶಸ್ತಿಗಳನ್ನು ತನ್ನ ಸಮಗ್ರ ಸಾಧನೆಗಾಗಿ ಗಳಿಸಿದ್ದಾಳೆ.
Key words: Cosmic canvas, state, student , winner , national level, painting competition