ಕಾಂಗ್ರೆಸ್ ಪಕ್ಷದಿಂದ ಸಿಎಂ ಆಪ್ತ ಜಿ.ವಿ ಸೀತಾರಾಮ್ ಉಚ್ಚಾಟನೆ

ಬೆಂಗಳೂರು, ಆಗಸ್ಟ್,9,2025 (www.justkannada.in): ಒಕ್ಕಲಿಗರ ಕುರಿತು ಅವಾಚ್ಯ ಪದ ಬಳಕೆ  ಆರೋಪ ಹಿನ್ನೆಲೆಯಲ್ಲಿ  ಸಿಎಂ ಸಿದ್ದರಾಮಯ್ಯ ಪರಮಾಪ್ತ ಹಾಗೂ ಮಾಜಿ  ಕಾಂಗ್ರೆಸ್ ವಕ್ತಾರ ಜಿ.ವಿ ಸೀತಾರಾಮ್ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೌದು ಜಿ.ವಿ ಸೀತಾರಾಮ್  ಅವರನ್ನ ಉಚ್ಚಾಟನೆಗೊಳಿಸಿ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿಯಿಂದ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.  ಒಕ್ಕಲಿಗ ಸಮುದಾಯದ ಬಗ್ಗೆ  ಅವಹೇಳನಕಾರಿ ಪದ ಬಳಕೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಸೀತಾರಾಮ ಅವರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಅಲ್ಲದೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸಹ ರದ್ದುಗೊಳಿಸಲಾಗಿದೆ.

Key words: CM, close, G.V. Sitaram, expelled, Congress party