ಬಾಗಲಕೋಟೆ,ಆಗಸ್ಟ್,9,2025 (www.justkannada.in): ಸಹಪಾಠಿಗಳಿಂದ ರ್ಯಾಗಿಂಗ್ ನಿಂದ ಬೇಸತ್ತ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಅಂಜಲಿ ಮುಂಡಾಸ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಬಾಗಲಕೋಟೆಯ ಗುಳೇದಗುಡ್ಡದ ಬಂಡಾರಿ ಕಾಲೇಜಿನಲ್ಲಿ ಅಂಜಲಿ ಮುಂಡಾಸ್ ಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಈ ನಡುವೆ ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಅಂಜಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಸಹಪಾಠಿ ವರ್ಷ ಮತ್ತು ಪ್ರದೀಪ್ ವಿರುದ್ದ ಕಿರುಕುಳ ಆರೋಪ ಕೇಳಿ ಬಂದಿದೆ.
ನನ್ನನ್ನು ಮಾನಸಿಕವಾಗಿ ಇವರು ಕುಗ್ಗಿ ಸಿದ್ದಾರೆ. ಮತ್ತು ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಮ್ಮನೆ ಬಿಡಬಾರದು ಇವರೇ ಮೂವರು ನನ್ನ ಸಾವಿಗೆ ಕಾರಣರಾಗಿದ್ದಾರೆ ಎಂದು ಡೆತ್ ನೋಟ್ ನಲ್ಲಿ ವಿದ್ಯಾರ್ಥಿನಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.
Key words: Student, commits suicide , death note