ಮಂಡ್ಯ,ಆಗಸ್ಟ್,5,2025 (www.justkannada.in): ಪೊಲೀಸ್ ಪೇದೆ ಸೈಯ್ಯದ್ ಮನ್ಸೂರ್ ಮೇಲೆ ಮಾರಣಾಂತಿಕ ಹಲ್ಲೆಯಾದರೂ ಸಹ ಕೆ.ಆರ್.ಪೇಟೆ ಇನ್ಸ್ ಪೆಕ್ಟರ್ ಡಮ್ಮಿ ಕೇಸ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸೈಯ್ಯದ್ ಮನ್ಸೂರ್ ರಾಮನಗರ ಡಿಸಿ ಗನ್ ಮ್ಯಾನ್ ಆಗಿದ್ದು, ಬೈಕ್ ರೇಸ್ ವೀಕ್ಷಣೆ ವೇಳೆ ಕಾಲು ಟಚ್ ಮಾಡಿದ್ದಕ್ಕೆ ಕಿರಿಕ್ ಆಗಿ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ನಡುವೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ಇದ್ದರೂ ಪೇದೆ ಸೈಯ್ಯದ್ ಮನ್ಸೂರ್ ರಕ್ಷಣೆಗೆ ಮುಂದಾಗಬೇಕಿದ್ದ ಕೆ.ಆರ್.ಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಡಮ್ಮಿ ಕೇಸ್ ಹಾಕಿದ್ದಾರೆ ಎನ್ನಲಾಗಿದೆ. ಸೈಯ್ಯದ್ ಮನ್ಸೂರ್ ಮೇಲೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿರೂ ಕೇವಲ ನಾಲ್ಕೈದು ಮಂದಿ ಮೇಲೆ ಮಾತ್ರ ಎಫ್ಐ ಆರ್ ದಾಖಲಿಸಿದ್ದಾರೆ.
ಹಲ್ಲೆಗೆ ಒಳಗಾದ ಪೇದೆ ಸಯ್ಯದ್ ಮನ್ಸೂರ್ ಅಕ್ಕ ಹಾಗೂ ತಮ್ಮ ಕೆ.ಆರ್.ಪೇಟೆಯಲ್ಲಿಯೇ ಪೇದೆಯಾಗಿ ಕೆಲಸ ಮಾಡುತ್ತಿದ್ದು ಅಕ್ಕ- ತಮ್ಮ ಇಬ್ಬರ ಮೇಲಿನ ಕೋಪಕ್ಕೆ ಇನ್ಸ್ ಪೆಕ್ಟರ್ ಸೇಡು ತೀರಿಸಿಕೊಳ್ಳಲು ಮುಂದಾದರೇ? ಎಂಬ ಪ್ರಶ್ನೆ ಉದ್ಬವಿಸಿದೆ.
ಪೊಲೀಸ್ ಕುಟುಂಬದವರೇ ಆದರೂ ಪೊಲೀಸರ ರಕ್ಷಣೆಗೆ ಮುಂದಾಗಿಲ್ಲ. ಪಾಚಿಗೆ ಪಾಚಿ ವೈರಿ ಅನ್ನೋ ಹಾಗೆ ಪೊಲೀಸ್ ಕುಟುಂಬಕ್ಕೆ ಪೊಲೀಸರೇ ವೈರಿಯೇ ಎಂಬಂತಾಗಿದೆ. ಪೊಲೀಸರ ನಡೆಯಿಂದಾಗಿ ಹಲ್ಲೆಗೊಳಗಾದ ಪೇದೆಯ ಕುಟುಂಬಸ್ಥರು ಅಸಹಾಯಕ ಸ್ಥಿತಿಯಲ್ಲಿದ್ದು, ಹಲ್ಲೆಕೋರ ಆರೋಪಿಗಳ ಪರ ಪೊಲೀಸ್ ಇನ್ಸ್ ಪೆಕ್ಟರ್ ಇದ್ದಾರೆಯೇ ಎಂಬ ಅನುಮಾನ ಮೂಡಿದೆ.
ಇನ್ನು ಸಯ್ಯದ್ ಮನ್ಸೂರ್ ಮೇಲೆ ಹಲ್ಲೆ ಮಾಡುತ್ತಿದ್ದರೂ ಜನ ಮೂಖ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರು ಪೊಲೀಸರು ಕೈಕಟ್ಟಿ ನಿಂತಿದ್ದರು ಎನ್ನಲಾಗಿದೆ. ಮಾರಣಾಂತಿಕ ಹಲ್ಲೆ ಮಾಡುತ್ತಿದ್ದ ದೃಶ್ಯ ಡ್ರೋಣ್ ಸೆರೆಯಾಗುತ್ತಿದ್ದ ಈ ಹಿನ್ನೆಲೆಯಲ್ಲಿ ಅದನ್ನ ನೋಡಿ ಕಿಡಿಗೇಡಿಗಳು ಓಡಿ ಹೋಗಿದ್ದರು. ಹಲ್ಲೆಗೊಳಗಾಗಿ ತೀವ್ರ ರಕ್ತಸ್ರವಾದಿಂದ ನರಳಾಡುತ್ತಿದ್ದ ಪೇದೆ ಮನ್ಸೂರ್ ರನ್ನು ರಕ್ಷಿಸಿ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
Key words: Dummy Case, deadly ,assault ,police , Inspector, revenge