ಬೆಂಗಳೂರು,ಆಗಸ್ಟ್,2,2025 (www.justkannada.in): ಕೆ.ಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲುಶಿಕ್ಷೆ ನೀಡುವಂತೆ ನ್ಯಾಯಾಲಯಕ್ಕೆ ಎಸ್ ಪಿಪಿ ಜಗದೀಶ್ ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಎಂದು ನಿನ್ನೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದು ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಈ ನಡುವೆ ಶಿಕ್ಷೆ ಪ್ರಮಾಣದ ಬಗ್ಗೆ ಇಂದು ವಿಚಾರಣೆ ನಡೆಯುತ್ತಿದೆ.
ಈ ವೇಳೆ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಜಗದೀಶ್, ಆರೋಪಿಯ ವಿರುದ್ದ ಹಲವು ಅತ್ಯಾಚಾರ ಪ್ರಕರಣಗಳಿವೆ. ಬಹಳಷ್ಟು ಜನರ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿದ್ದು ಗಂಭೀರ ಅಪರಾಧ ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿ ಹೇಳಿಕೆ ಪಡೆದಿದ್ದಾರೆ. ಸಾಕ್ಷಾಧಾರ ನಾಶಪಡಿಸಲು ಯತ್ನಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯೇ ವಿಧಿಸಬೇಕು. ಈತನಿಗೆ ಕಠಿಣ ಶಿಕ್ಷೆ ನೀಡಿ ಸಮಾಜಕ್ಕೆ ಸಂದೇಶ ರವಾನಿಸಬೇಕು ಎಂದು ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ತೋರಿಲ್ಲ ತನಗಿರುವ ಸ್ಥಾನಮಾನವನ್ನ ಅಪರಾಧಿ ದುರುಪಯೋಗಪಡಿಸಿಕೊಂಡಿದ್ದಾನೆ. ಅಪರಾಧಿ ವಿರುದ್ದ ಇನ್ನು ಹಲವು ಕೇಸ್ ಗಳಿವೆ. ಹಣ ಅಧಿಕಾರವಿರುವ ಇವರಿಗೆ ಕಡಿಮೆ ಶಿಕ್ಷೆಯಾಗಬಾರದು. ಹೀಗಾಗಿ ಜೀವನ ಪರ್ಯಂತ ಸೆರೆವಾಸ ನೀಡುವಂತೆ ಮನವಿ ಮಾಡಿದರು.
Key words: Rape case, life imprisonment, Prajwal Revanna, SPP, appeals