Sunday, August 23, 2026

BDA Apartments

Home Crime ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಿನ್ನೆಲೆ, ದಿಢೀರ್ ಕಾರ್ಯಾಚರಣೆ:  ಖುದ್ದು ಫೀಲ್ಡ್ ಗಿಳಿದ ಪೊಲೀಸ್ ಕಮಿಷನರ್

ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಿನ್ನೆಲೆ, ದಿಢೀರ್ ಕಾರ್ಯಾಚರಣೆ:  ಖುದ್ದು ಫೀಲ್ಡ್ ಗಿಳಿದ ಪೊಲೀಸ್ ಕಮಿಷನರ್

ಮೈಸೂರು,ಜುಲೈ,28,2025 (www.justkannada.in): ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರು ಪೊಲೀಸರು ನಿನ್ನೆ ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆಸಿ ತಪಾಸಣೆ ಕೈಗೊಂಡಿದ್ದಾರೆ.

ಸ್ವತಃ ಖುದ್ದು ಫೀಲ್ಡಿಗಿಳಿದ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ನಿನ್ನೆ ರಾತ್ರಿ ಮಂಡಿ ಮೊಹಲ್ಲಾ ದಾಳಿ ನಡೆಸಿದ್ದು, ಕಾರ್ಯಾಚರಣೆ ವೇಳೆ 26 ಜನ ಗಾಂಜಾ ಸೇವಿಸಿದವರು ಪತ್ತೆಯಾಗಿದ್ದಾರೆ. ಓರ್ವ ಗಾಂಜಾ ಮಾರಾಟಗಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಮಂಡಿ ಮೊಹಲ್ಲಾ, ಉದಯಗಿರಿ ಎನ್ ಆರ್ ಮೊಹಲ್ಲಾ ನಜರಬಾದ್ ಕೆ.ಆರ್ ಮೊಹಲ್ಲಾ ಸೇರಿ ಹಲವು ಕಡೆ ಏಕಕಾಲಕ್ಕೆ ಡಿಸಿಪಿಗಳು ಎಸಿಪಿಗಳು ಇನ್ಸ್‌ ಪೆಕ್ಟರ್ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು 59 ಗೋದಾಮುಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇನ್ನು ಹಾಸ್ಟೆಲ್‌ ಗಳು ಸೇರಿ ಹಲವು ಕಡೆ ಪೊಲೀಸರು ತಪಾಸಣೆ ನಡೆಸಿದ್ದು ಈ ಹಿಂದೆ ಗಾಂಜಾ ಮಾರಾಟ‌ ಮಾಡುತ್ತಿದ್ದ35 ಜನರನ್ನ ವಿಚಾರಣೆಗೊಳಪಡಿಸಿದ್ದಾರೆ. ಇಂದು ಸಹ ಪೊಲೀಸರ ಕಾರ್ಯಾಚರಣೆ  ಮುಂದುವರಿಯಲಿದೆ.vtu

Key words: Mysore, drug, action, Police, Raid