ಬೆಂಗಳೂರು,ಜುಲೈ,26,2025 (www.justkannada.in): ಮಹದಾಯಿ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿಕೆ ಸುರೇಶ್ ಬಿಜೆಪಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿ.ಕೆ ಸುರೇಶ್, ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಯೋಜನೆ ಆಗುತ್ತಿಲ್ಲ. ಕೇಂದ್ರ ಆದಷ್ಟು ಬೇಗ ಅನ್ಯಾಯ ಸರಿಪಡಿಸಲಿ. ಗೋವಾ ಕರ್ನಾಟಕದವರನ್ನ ಕರೆಸಿ ಮಾತನಾಡಲಿ. ರಾಜ್ಯದಲ್ಲಿ ಬಿಜೆಪಿಯಲ್ಲಿ 20ಕ್ಕೂ ಹೆಚ್ಚು ಸಂಸದರಿದ್ದಾರೆ. ಆದರೆ ರಾಜ್ಯ ಬಿಜೆಪಿ ಸಂಸದರು ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ. ಪ್ರಹ್ಲಾದ್ ಜೋಶಿ 10 ವರ್ಷಗಳಿಂದ ಮಂತ್ರಿ ಆಗಿದ್ದಾರೆ. ಆದರೆ ಜೋಶಿಯವರಿಗೆ ಯೋಜನೆ ಬೇಕಾಗಿಲ್ಲ ಎಂದು ಕಿಡಿಕಾರಿದರು.
ಚುನಾವಣೆ ವೇಳೆ ಮತಗಳ್ಳತನ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ವೋಟರ್ ಲೀಸ್ಟ್ ನಲ್ಲಿ ಗೊಂದಲ ಉಂಟಾಗಿತ್ತು. ಮತಪಟ್ಟಿ ಸಂಖ್ಯೆ ಏರಿಸಿ ಡಿಲಿಟ್ ಮಾಡಿದರು. ರಾಹುಲ್ ಗಾಂಧಿ ಅವರು ಸಿಎಂ ಡಿಸಿಎಂ ಹೇಳಿದ್ದನ್ನ ಹೇಳಿದ್ದಾರೆ. ರಾಹುಲ್ ಗಾಂಧಿ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಡಿಕೆ ಸುರೇಶ್ ತಿಳಿಸಿದರು.
Key words: Mahadayi scheme, BJP, MPs, Justice, D.K. Suresh