ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಸಿದ್ದರಾಮಯ್ಯ ಹೋಲಿಕೆ: ಯತೀಂದ್ರಗೆ ಸಂಸದ ಯದುವೀರ್ ತಿರುಗೇಟು

ಮೈಸೂರು,ಜುಲೈ,26,2025 (www.justkannada.in):  ಅಭಿವೃದ್ದಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿಎಂ ಸಿದ್ದರಾಮಯ್ಯರನ್ನ ಹೋಲಿಕೆ ಮಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಯದುವೀರ್, ಯತೀಂದ್ರ ಸಿದ್ದರಾಮಯ್ಯ ಹೋಲಿಕೆ ಮಾಡಿ ಮಾತನಾಡಿದ್ದು ಸರಿಯಲ್ಲ.  ಅವರು ಜಾಸ್ತಿ ಇವರು ಕಡಿಮೆ ಎನ್ನಬಾರದು. ಮಹಾರಾಜರು ಅವರು ಕೆಲಸ ಅವರು ಮಾಡಿದ್ದಾರೆ. ವಿಷಯ ಡೈವರ್ಟ್ ಮಾಡಲು ಹೇಳೋದು ಸರಿಯಲ್ಲ ಎಂದು ಟೀಕಿಸಿದರು.

ಮಹಾರಾಜರು ಏನು ಮಾಡಿದ್ದಾರೆ ಎಂದು ಜನರಿಗೆ ಗೊತ್ತು.  ವಿಷಯ ಡೈವರ್ಟ್ ಮಾಡಲು ಯಾವುದೋ ವಿಚಾರ ಹೇಳೋದು ಸರಿಯಲ್ಲ.  ಮೈಸೂರು ಏರ್ ಪೋರ್ಟ್ ಗೆ 15 ವರ್ಷಗಳಿಂದ ಏನು ಕೊಟ್ಟಿದ್ದೀರಾ ಮೊದಲು ಜನರ ಸಮಸ್ಯೆಯನ್ನು ಬಗೆಹರಿಸಿ ಎಂದು ಸಂಸದ ಯದುವೀರ್ ಟಾಂಗ್ ಕೊಟ್ಟರು.vtu

Key words: MP, Yaduveer, MLC, Yathindra, Siddaramaiah, Nalvadi Krishnaraja Wodeyar