ಮೈಸೂರು: ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿ ಸಾವು

ಮೈಸೂರು,ಜುಲೈ,21,2025 (www.justkannada.in):  ಜುಲೈ 19 ರಂದು ಮೈಸೂರಿನಲ್ಲಿ ನಡೆದಿದ್ದ  ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಬಂದ್ದಿದ್ದ ವ್ಯಕ್ತಿಯೊಬ್ಬರು  ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತುರುಗನೂರು ಗ್ರಾಮದ ಕುಮಾರ್ (39) ಮೃತಪಟ್ಟ ವ್ಯಕ್ತಿ. ಜುಲೈ 19ರಂದು  ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ  ಕಾಂಗ್ರೆಸ್ ನ ಸಾಧನಾ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಭಾಗವಹಿಸಿದ್ದರು.

ಈ ನಡುವೆ 300 ರೂಪಾಯಿ ಕೊಡುತ್ತೇವೆ ಎಂದು ಸಮಾವೇಶಕ್ಕೆ ತುರುಗೂರಿನ ಕಾಂಗ್ರೆಸ್ ಮುಖಂಡರು ಕುಮಾರ್ ನನ್ನು ಕರೆತಂದಿದ್ದರಂತೆ. ಆದರೆ ಕಾಂಗ್ರೆಸ್ ಸಮಾವೇಶ ಮುಗಿದರೂ ಕುಮಾರ್ ಮನೆಗೆ ವಾಪಸ್  ಆಗಿರಲಿಲ್ಲ. ರಾತ್ರಿಯಾದರೂ ಕುಮಾರ್ ಮನೆಗೆ  ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ಕುಟುಂಬದವರು ಬನ್ನೂರು ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ಈ ವೇಳೆ ಪೊಲೀಸರು ಮೈಸೂರು ನಗರ ಠಾಣೆಯಲ್ಲಿ ದೂರು ನೀಡಿ ಎಂದು ಹೇಳಿ ಕಳುಹಿಸಿದ್ದಾರೆ. ನಂತರ ಕುಟುಂಬಸ್ಥರು ಮೈಸೂರು ಠಾಣೆಯಲ್ಲಿ ದೂರು ನೀಡಿದ್ದು, ಇಂದು ಮೈಸೂರಿನ ಶವಾಗಾರದಲ್ಲಿ ಕುಮಾರ್ ಮೃತದೇಹ ಪತ್ತೆಯಾಗಿದೆ. ಮದ್ಯಪಾನ ಜಾಸ್ತಿಯಾಗಿ ಕುಮಾರ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ  ಲಭ್ಯವಾಗಿದೆ.vtu

Key words: Mysore, man, death, Congress, Sadhana convention