ಕೇಂದ್ರದಿಂದ ತನಿಖಾ ಸಂಸ್ಥೆ ದುರ್ಬಳಕೆ: ಬಿಜೆಪಿ ಒಬ್ಬರ ಮೇಲೂ ಕೇಸ್ ಇಲ್ಲ- ಡಿಸಿಎಂ ಡಿಕೆ ಶಿವಕುಮಾರ್

ರಾಮನಗರ,ಜುಲೈ,21,2025 (www.justkannada.in):  ಮುಡಾ ಹಗರಣಕ್ಕೆ  ಸಂಬಂಧಿಸಿದಂತೆಇಡಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್,  ಕೇಂದ್ರದಿಂದ ತನಿಖಾ ಸಂಸ್ಥೆ ದುರ್ಬಳಕೆಯಾಗುತ್ತಿದೆ.  ಬಿಜೆಪಿ ಒಬ್ಬರ ಮೇಲೂ ಕೇಸ್ ಇಲ್ಲ ಎಂದರು.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಇಡಿ ರಾಜಕೀಯ ಒತ್ತಡದಿಂದ ಕೆಲಸ ಮಾಡಬಾರದು.   ದಳದವರ ಮೇಲೆ ಯಾವುದೇ ಕೇಸ್ ಇಲ್ಲ.  ಬರೀ ನಮ್ಮ ಪಾರ್ಟಿಯವರ ಮೇಲೆ ಮಾತ್ರ ಪ್ರಕರಣಗಳನ್ನ ದಾಖಲಿಸಿದ್ದಾರೆ.   ರಾಹುಲ್ ಗಾಂಧಿ,  ಸೋನಿಯಾ ಗಾಂಧಿ ಅವರ ಮೇಲೆ ಕೇಸ್ ಹಾಕಿದ್ದಾರೆ.  ಬಿಜೆಪಿಯವರು ಏನ್ ಕ್ಲೀನ್ ಆಗಿದ್ದಾರಾ..? ಎಂದು ಪ್ರಶ್ನಿಸಿದರು.

ಸಣ್ಣಮಟ್ಟದ ವ್ಯಾಪಾರಿಗಳಿಗೆ ಜಿಎಸ್‍ಟಿ ನೋಟೀಸ್ ನೀಡಿರುವುದರ ಹಿಂದೆ ಕೇಂದ್ರ ಸರ್ಕಾರದ ಜಿಎಸ್‍ಟಿ ಕೌನ್ಸಿಲ್‍ನ ಪತ್ರದ ಪಾತ್ರ ಇದೆ. ತರಕಾರಿ ಮಾರುವವರು, ಎಳನೀರು ವ್ಯಾಪಾರಿಗಳು, ಹೂಕಟ್ಟುವವರು, ಹಣ್ಣಿನ ವ್ಯಾಪಾರಿಗಳು, ಬೀದಿಬದಿಯ ವ್ಯಾಪಾರಿಗಳಿಗೂ ಕೇಂದ್ರ ಸರ್ಕಾರದ ಜಿಎಸ್‍ಟಿ ಕಾನೂನಿನಿಂದ ತೊಂದರೆಯಾಗುತ್ತಿದೆ. ಬಿಜೆಪಿಯವರು ಬಾಳೆಹಣ್ಣು ತಿಂದು ನಮ್ಮ ಬಾಯಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.vtu

Key words: Misuse, investigative agency, Centre, DCM, DK Shivakumar