ಮೈಸೂರು,ಜುಲೈ,19,2025 (www.justkannada.in): ಮೈಸೂರು ನಗರ ನಾಲ್ವಡಿ ಕೃಷ್ಣರಾಜರ ನಂತರ ಅಭಿವೃದ್ಧಿ ಕಂಡಿದ್ದರೆ ಅದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಮಾತ್ರ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯವನ್ನ ತಂದುಕೊಟ್ಟ ಪಕ್ಷ. ಇಂತಹ ಒಂದು ಪಕ್ಷದಲ್ಲಿ ಸಿಎಂ, ಡಿಸಿಎಂ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಭಿನಂದನೆ ಸಲ್ಲಿಸುತ್ತೇನೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಗೆ ಅನೇಕ ಟೀಕೆಗಳನ್ನ ಮಾಡಿದ್ದಾರೆ. ಅವರ ಕಾಲಾವಧಿಯಲ್ಲಿ ಏನೂ ಮಾಡದವರು ಈಗ ಟೀಕೆ ಮಾಡುತ್ತಾರೆ. ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಸೇರಿದಂತೆ ನೂರಾರು ಕೋಟಿಗಳ ಯೋಜನೆಗಳನ್ನ ಸಿದ್ದರಾಮಯ್ಯನವರು ಮೈಸೂರಿಗೆ ಕೊಟ್ಟಿದ್ದಾರೆ. ಏನೂ ಮಾಡಿಲ್ಲ ಅಂತ ನಿರಾಧಾರ ಆರೋಪವನ್ನ ಬಿಜೆಪಿಯವರು ಮಾಡುತ್ತಾರೆ. ದಾಖಲೆ ಸಮೇತ ಬನ್ನಿ ಚರ್ಚೆ ಮಾಡಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಮೈಸೂರು ನಗರ ನಾಲ್ವಡಿ ಕೃಷ್ಣರಾಜರ ನಂತರ ಅಭಿವೃದ್ಧಿ ಕಂಡಿದ್ದರೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಅಂತ ಹೇಳಲು ಸಂತೋಷವಾಗುತ್ತದೆ. ಐದು ಗ್ಯಾರಂಟಿಗಳನ್ನ ಯಾವುದೇ ಜಾತಿ ನೋಡಿ ಕೊಟ್ಟಿಲ್ಲ. ಆರ್ಥಿಕ ಸ್ವಾವಲಂಬನೆ ಕೊಡಲಿಕ್ಕೆ ಪೂರಕವಾದ ಯೋಜನೆಗಳನ್ನ ಕೊಟ್ಟಿದ್ದೇವೆ. ಯಾರು ಕೆಲಸ ಮಾಡಿಲ್ಲವೋ ಅವರು ಮೈ ಪರಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಕೊಟ್ಟ ಆಶ್ವಾಸನೆಯಂತೆ ನಾವು ನಡೆದುಕೊಂಡಿದ್ದೇವೆ. ಸಿದ್ದರಾಮಯ್ಯ ಹೋರಾಟದ ಮೂಲಕ ಅಸ್ಥಿರವಾದ ಸಮಾಜವನ್ನ ಸ್ಥಿರ ಸಮಾಜವನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗುಣಗಾನ ಮಾಡಿದರು.
Key words: Mysore, development, Siddaramaiah, Minister, H.C. Mahadevappa