Sunday, September 13, 2026

BDA Apartments

ಚಾಮುಂಡಮ್ಮನಿಗೆ ಉಘೇ…. ಉಘೇ… ಚಾಮುಂಡಿಬೆಟ್ಟದಲ್ಲಿ ಸಂಭ್ರಮದ ರಥೋತ್ಸವ BDA JK_Adv BDA...
Home Front Page ಚಾಮುಂಡಮ್ಮನಿಗೆ ಉಘೇ…. ಉಘೇ… ಚಾಮುಂಡಿಬೆಟ್ಟದಲ್ಲಿ ಸಂಭ್ರಮದ ರಥೋತ್ಸವ

ಚಾಮುಂಡಮ್ಮನಿಗೆ ಉಘೇ…. ಉಘೇ… ಚಾಮುಂಡಿಬೆಟ್ಟದಲ್ಲಿ ಸಂಭ್ರಮದ ರಥೋತ್ಸವ

ಮೈಸೂರು, ಅಕ್ಟೋಬರ್ 13, 2019 (www.justkannada.in): ಚಾಮುಂಡಿಬೆಟ್ಟದಲ್ಲಿ ಇಂದು ಚಾಮುಂಡೇಶ್ವರಿ ರಥೋತ್ಸವ ಸಂಭ್ರಮದಿಂದ ನಡೆಯಿತು.

ದಸರಾ ಮುಗಿದ ಬಳಿಕ ಆಚರಿಸಲ್ಪಡುವ ಚಾಮುಂಡಿ ರಥೋತ್ಸವ ಇಂದು ಬೆಳಗ್ಗೆ ನೆರವೇರಿತು. ಯದುವಂಶದ ಮಹಾರಾಜ ಯದುವೀರ್ ಒಡೆಯರ್‌ರಿಂದ ರಥೋತ್ಸವಕ್ಕೆ ಚಾಲನೆ‌ ದೊರೆಯಿತು. ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನ ದೊಡ್ಡರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

ರಥ ಎಳೆದು ರಥೋತ್ಸವಕ್ಕೆ ಯದುವೀರ್ ಚಾಲನೆ ನೀಡಿದರು. ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು. ರಥ ಎಳೆದು ಚಾಮುಂಡೇಶ್ವರಿಯ ದರ್ಶನ ಪಡೆದ ಭಕ್ತಗಣ ಸಂಭ್ರಮಿಸಿತು. ದೇವಾಲಯದ ಸುತ್ತ ಒಂದು ರಥ ಸುತ್ತು ಸಾಗಿತು. ಯದುವೀರ್’ಗೆ ಶಾಸಕ ಜಿಟಿ ದೇವೇಗೌಡ ಹಾಗೂ ಮೇಯರ್ ಪುಷ್ಪಲತಾ ಜಗನ್ನಾಥ್ ಸಾಥ್ ನೀಡಿದರು.