ಮೈಸೂರು,ಜುಲೈ,12,2025 (www.justkannada.in): ಸಿಎಂ ಬದಲಾವಣೆ ವಿಚಾರ, 5 ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ ಮೇಲೆ ಮುಗಿಯಿತು ಬಿಡಿ ಮತ್ತಿನ್ನೇನು ಎಂದು ಮಾಧ್ಯಮಗಳಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ರಾಜ್ಯದಲ್ಲಿ ಕ್ರಾಂತಿ ಅಲ್ಲ ಸಂಕ್ರಾಂತಿಯೂ ನಡೆದೇ ನಡೆಯುತ್ತದೆ . ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ ಎಂದರು.
ಕಾಂಗ್ರೆಸ್ ಸಂಘಟನೆಗೆ ಮತ್ತು ಅಧಿಕಾರಕ್ಕೆ ತರಲು ಡಿಕೆ ಶಿವಕುಮಾರ್ ಹೆಚ್ಚು ಶ್ರಮ ವಹಿಸಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನ ಕಟ್ಟಿದ್ದಾರೆ. ಎಲ್ಲರೂ ಸೇರಿದ್ರೆ ಅಲ್ವಾ ಡ್ಯಾಂ ಕಟ್ಟಲು ಆಗೋದು. ಹನಿ ಹನಿ ಗೂಡಿದರೆ ಹಳ್ಳ ಅಲ್ಲವಾ..? ಖರ್ಗೆ ಪರಮೇಶ್ವರ್, ದಿನೇಶ್ ಗುಂಡೂರಾವ್ ಕೂಡ ಅಧ್ಯಕ್ಷರಾಗಿದ್ದರು. ಪಕ್ಷದ ಕಾರ್ಯಕರ್ತರೆಲ್ಲರೂ ಸೇರಿ ಪಕ್ಷ ಕಟ್ಟಲಾಗಿದೆ ಎಂದರು.
Key words: CM, change, issue, Siddaramaiah, Minister, H.C. Mahadevappa