ಚಿರತೆ ಅನುಮಾನಸ್ಪದ ಸಾವು: ವಿಷಪ್ರಾಶನ ಶಂಕೆ

ಚಾಮರಾಜನಗರ,ಜುಲೈ,12,2025 (www.justkannada.in): ಚಾಮರಾಜನಗರದ ಮೀಣ್ಯಂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಐದು ಹುಲಿಗಳು ವಿಷಪ್ರಾಶನ ಪ್ರಕರಣ ಮಾಸುವುದಕ್ಕೂ ಮುನ್ನ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಚಾಮರಾಜನಗರ ಜಿಲ್ಲೆ  ವಲಯದ ಕೊತ್ತಲವಾಡಿ ಬಳಿಯ ಕ್ಯಾರಿಯಲ್ಲಿ ಚಿರತೆ ಶವ ಪತ್ತೆಯಾಗಿದೆ.

ಚಾಮರಾಜನಗರ ಜಿಲ್ಲೆ  ವಲಯದ ಕೊತ್ತಲವಾಡಿ ಬಳಿಯ ಕ್ಯಾರಿಯಲ್ಲಿ5 ರಿಂದ 6 ವರ್ಷದ ಗಂಡು  ಚಿರತೆ ಸಾವನ್ನಪ್ಪಿದ್ದು, ಪಕ್ಕದಲ್ಲೇ ಕರು, ನಾಯಿ ಕಳೇಬರ ಪತ್ತೆಯಾಗಿದೆ. ಹೀಗಾಗಿ ಕರುವಿಗೆ ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಕರುವಿನ ಮಾಂಸ ತಿಂದು ನಾಯಿ,ಚಿರತೆ ಎರಡು ಸಾವನ್ನಪ್ಪಿರುವ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಬಿಆರ್‌ಟಿ ಡಿಸಿಎಫ್ ಶ್ರೀಪತಿ, ಎಸಿಎಫ್ ಮಂಜುನಾಥ್,   ಸೇರಿದಂತೆ  ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಪ್ರಯೋಗಾಲಯದ ವರದಿ ಬಂದ ಬಳಿಕ ಚಿರತೆ ಸಾವಿಗೆ ನಿಖರ ಕಾರಣ ಬಹಿರಂಗವಾಗಲಿದೆ.vtu

Key words: Leopard, dies, suspiciously, Chamaraja nagar