ನಾಯಕತ್ವ ಬದಲಾವಣೆ ವಿಚಾರ: ಹೈಕಮಾಡ್ ನಿರ್ಧಾರಕ್ಕೆ ನಾನು ಡಿಕೆಶಿ ಬದ್ಧ- ಸಿಎಂ ಸಿದ್ದರಾಮಯ್ಯ

ನವದೆಹಲಿ,ಜುಲೈ,10,2025 (www.justkannada.in): ಅಧಿಕಾರ ಹಂಚಿಕೆ ಬಗ್ಗೆ ಯಾವ ಚರ್ಚೆ ಆಗಿಲ್ಲ.  ಏನೇ ತೀರ್ಮಾನ ಮಾಡಿದ್ರೂ ಒಪ್ಪಬೇಕೆಂದು ಹೈಕಮಾಂಡ್ ಹೇಳಿದೆ. ಹೈಕಮಾಡ್ ನಿರ್ಧಾರಕ್ಕೆ ನಾನು  ಡಿಸಿಎಂ ಡಿಕೆ ಶಿವಕುಮಾರ್ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  2.5 ವರ್ಷ ಆಗಿರುವುದರಿಂದ ಸ್ವಾಭಾವಿಕವಾಗಿ ಕುರ್ಚಿ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇದೆಯಾ..? ಸುಖಾ ಸುಮ್ಮನೆ ಊಹಾಪೋಹಗಳು ಹರಿದಾಡುತ್ತಿವೆ ಪವರ್ ಶೇರಿಂಗ್ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡರೂ ನಾವು ಬದ್ದ ಎಂದಿದ್ದೇವೆ. ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಒಂದಿಬ್ಬರು ಶಾಸಕರು ಹೇಳುತ್ತಿದ್ದಾರೆ  ನನಗೂ ಸಿದ್ದರಾಮಯ್ಯ ಮುಂದುವರೆಯಲಿ ಎಂದು ಶಾಸಕರು ಹೇಳುತ್ತಿದ್ದಾರೆ. ಇದು ಪಕ್ಷದ ನಿರ್ಧಾರ ಅಲ್ಲ ವೈಯಕ್ತಿಕ.  ಕೆಲ ಡಿಕೆಶಿ ಬೆಂಬಲಿಗರು ಅಭಿಮಾನದಿಂದ ಸಿಎಂ ಆಗಲಿ ಎಂದು ಹೇಳುತ್ತಾರೆ ಎಂದರು.

ಶಾಸಕರ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,  ನಾಯಕತ್ವ ವಿಚಾರವಾಗಿ ಮಾಡುತ್ತಿರುವ ಸಭೆ ಅಲ್ಲ ಎಂದು ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಈಗಾಗಲೇ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.  ಏನೇ ತೀರ್ಮಾನ ಮಾಡಿದ್ರೂ ಒಪ್ಪಬೇಕೆಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಡಿಕೆಶಿ ಬದ್ದ ಎಂದರು.vtu

Key words: Leadership, change, high command, decision, CM,  Siddaramaiah