ಪುತ್ರ ಆತ್ಮಹತ್ಯೆಗೆ ಶರಣು: ವಿಚಾರ ತಿಳಿದು ತಂದೆ ಹೃದಯಾಘಾತದಿಂದ ಸಾವು

ಯಾದಗಿರಿ,ಜುಲೈ,10,2025 (www.justkannada.in):  ಪುತ್ರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿದು ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆ ವಡಗೇರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೆಹಬೂಬ್ ಆತ್ಮಹತ್ಯೆಗೆ ಶರಣಾದ ಯುವಕ. ಮೆಹಬೂಬ್ ಜಾತಿನಿಂದನೆ ಕೇಸ್ ಗೆ ಹೆದರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ವಿಚಾರ ತಿಳಿದ ಮೆಹಬೂಬ್ ತಂದೆಗೆ ಹೃದಯಾಘಾತವಾಗಿದ್ದು ತಂದೆಯೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಒಂದೇ ದಿನ ಒಂದೇ ಮನೆಯಲ್ಲಿ ಎರಡು ಸಾವಾಗಿದ್ದು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.vtu

Key words: Son, commits suicide, Father, dies, heart attack