ಮೈಸೂರು,ಜುಲೈ,4,2025 (www.justkannada.in): ಜಮೀನು ವಿಚಾರದಲ್ಲಿ ಸಹೋದರರ ನಡುವೆ ಉಂಟಾದ ಮನಸ್ತಾಪ ವಿಚಿತ್ರ ತಿರುವು ಪಡೆದುಕೊಂಡಿದೆ. ಸಾಕು ನಾಯಿಯಿಂದ ಕಚ್ಚಿಸಿರುವುದಾಗಿ ಆರೋಪಿಸಿ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಮೈಸೂರಿನ ಜೆಸಿ ನಗರದಲ್ಲಿ ಘಟನೆ ನಡೆದಿದೆ. ನಾಯಿ ಮಾಲೀಕ ಮನು ಎಂಬುವರ ವಿರುದ್ದ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ.ಮುಕುಂದ ಎಂಬುವರ ಮಗ ಚಿರಾಯು ಮೇಲೆ ಮನು ಅವರು ಸಾಕಿದ ಗ್ರೇಟ್ ಡೇನ್ ನಾಯಿ ದಾಳಿ ನಡೆಸಿದೆ. ಮಾಲೀಕನ ಆಜ್ಞೆ ಪ್ರಕಾರ ನಾಯಿ ದಾಳಿ ನಡೆಸಿದೆ ಎಂದು ಡಾ .ಮುಕುಂದ್ ಆರೋಪಿಸಿದ್ದಾರೆ.
ಡಾ.ಮುಕುಂದ್ ಹಾಗೂ ಮನು ಸಹೋದರರು. ಜಮೀನು ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪವಿದ್ದು, ಈ ವಿಚಾರದಲ್ಲಿ ಆಗಾಗ ಇಬ್ಬರ ನಡುವೆ ಗಲಾಟೆಗಳು ನಡೆಯುತ್ತಿತ್ತು. ಮನು ಗ್ರೇಟ್ ಡೇನ್ ನಾಯಿ ಸಾಕಿದ್ದು ಉದ್ದೇಶ ಪೂರ್ವಕವಾಗಿ ಬೆಲ್ಟ್ ಕಟ್ಟದೆ ವಾಕಿಂಗ್ ಕರದುಕೊಂಡು ಬರುತ್ತಾರೆ. ಎರಡು ದಿನಗಳ ಹಿಂದೆ ಬೆಲ್ಟ್ ಹಾಕದೆ ನಾಯಿಯನ್ನ ಕರೆತಂದ ಮನು ಎದುರಿಗೆ ಬಂದ ಚಿರಾಯು ಮೇಲೆ ದಾಳಿ ನಡೆಸುವಂತೆ ಆಜ್ಞೆ ಮಾಡಿದ್ದಾರೆ. ಮಾಲೀಕನ ಆಜ್ಞೆಯಂತೆ ಚಿರಾಯು ಮೇಲೆ ಗ್ರೇಟ್ ಡೆನ್ ದಾಳಿ ಮಾಡಿ ಗಾಯಗೊಳಿಸಿದೆ. ಮುಂಜಾಗ್ರತಾ ಕ್ರಮ ಅನುಸರಿಸದೆ ನಾಯಿಯನ್ನ ಕರೆತಂದು ದಾಳಿ ಮಾಡಿಸಿದ ಮನು ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಚಿರಾಯು ತಂದೆ ಡಾ.ಮುಕುಂದ್ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಎಫ್ ಐಆರ್ ಆಗಿದೆ.
Key words: Pet dog, attacks, young man, FIR, against, owner