ವೈದ್ಯಕೀಯ ವಿದ್ಯಾರ್ಥಿ ಮೇಲೆ ಹಲ್ಲೆ: ಮೂವರ ವಿರುದ್ದ FIR ದಾಖಲು

ಮೈಸೂರು,ಜುಲೈ,4,2025 (www.justkannada.in): ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ  ವೈದ್ಯಕೀಯ ವಿದ್ಯಾರ್ಥಿಯನ್ನ ಚೇಸ್ ಮಾಡಿ ನಡುರಸ್ತೆಯಲ್ಲಿ ಅಡ್ಡಗಟ್ಟಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ಮೈಸೂರಿನಲ್ಲಿ ನಡೆದಿದೆ.

ನಗರದ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಿದಾಸ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಫರೂಕಿಯಾ ಡೆಂಟಲ್ ಕಾಲೇಜು ವಿದ್ಯಾರ್ಥಿ ಧೃವನಾರಾಯಣ್ ಹಲ್ಲೆಗೊಳಗಾದ ಯುವಕ. ಕೆ.ಜಿ.ಕೊಪ್ಪಲಿನ ಯುವಕರಾದ ಪವನ್, ರಕ್ಷಿತ್ ಹಾಗೂ ಮತ್ತೋರ್ವನ ವಿರುದ್ದ ಪ್ರಕರಣ ದಾಖಲಾಗಿದೆ.

ಧೃವನಾರಾಯಣ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಮೈಸೂರು ಹುಣಸೂರು ರಸ್ತೆಯ ಭಾರತೀಯ ವಿಧ್ಯಾಭವನದ ಬಳಿ ಟ್ರಾಫಿಕ್ ಹೆಚ್ಚಾದ ಕಾರಣ ನಿಂತಿದ್ದಾರೆ. ಕಾರಿನಲ್ಲಿ ಒಂದು ಯುವತಿ ಜೊತೆ ಬರುತ್ತಿದ್ದ ಪವನ್ ಹಾಗೂ ರಕ್ಷಿತ್ ದಾರಿ ಬಿಡುವಂತೆ ಧಮ್ಕಿ ಹಾಕಿದ್ದಾರೆ. ವಾಹನಗಳು ಹೆಚ್ಚಾಗಿದ್ದ ಹಿನ್ನಲೆ ದಾರಿ ಬಿಡಲು ಸಾಧ್ಯವಾಗಿಲ್ಲ ಹಾಗೂ ಸ್ವಲ್ಪ ಕಾಯುವಂತೆ ಹೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಧೃವನಾರಾಯಣ್ ತಪ್ಪಿಸಿಕೊಂಡು ಬೈಕ್ ನಲ್ಲಿ ಮುಂದೆ ಸಾಗಿದ್ದಾರೆ. ನಂತರ ಚೇಸ್ ಮಾಡಕೊಂಡು ಬಂದು ಕಾಳಿದಾಸ ರಸ್ತೆಯಲ್ಲಿ ಅಡ್ಡಗಟ್ಟಿ ಕಾರ್ ನಲ್ಲಿದ್ದ ರಾಡ್ ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಯುವತಿಯೊಬ್ಬಳು ಇದ್ದಳೆಂದು ಧೃವನಾರಾಯಣ್ ಆರೋಪಿಸಿದ್ದಾರೆ.

ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಧೃವನಾರಾಯಣ್ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ನಡೆಸಿದ ಪವನ್ ಹಾಗೂ ರಕ್ಷಿತ್ ವಿರುದ್ದ  ಧೃವನಾರಾಯಣ್ ಸಹೋದರ ಸೂರಜ್ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.vtu

Key words: Assault, medical student, FIR, Mysore