ಮೈಸೂರು,ಜುಲೈ,3,2025 (www.justkannada.in): ಅಷಾಢ ಮಾಸ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಲಗ್ಗೆ ಇಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಆಷಾಢ ಮಾಸದ ವಿಶೇಷ ಜನ ದಟ್ಟಣೆ ಹಿನ್ನಲೆಯಲ್ಲಿ ಯಾವುದೇ ಅಂಗಡಿ ಮಳಿಗೆಗಳು ತೆರೆಯದಂತೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೂರು ದಿನ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಹೂವು ಹಣ್ಣು,ಕಾಯಿ ಸೇರಿದಂತೆ ಹಲವು ಕರಕುಶಲ ವಸ್ತಗಳ ಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಪೂಜಾ ಸಾಮಾಗ್ರಿ ವ್ಯಾಪಾರಿಗಳಿಗೆ ಸಮಸ್ಯೆ ಎದುರಾಗಿದೆ.
ಆಷಾಢ ಮಾಸದ ಒಂದು ತಿಂಗಳವರಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ಸೋಮವಾರ, ಮಂಗಳವಾರ,ಬುಧವಾರ ಮತ್ತು ಗುರುವಾರ ಎಂದಿನಂತೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು ಇದೀಗ ಚಾಮುಂಡೇಶ್ವರಿ ಪ್ರಾಧಿಕಾರದ ನಡೆಗೆ ವ್ಯಾಪಾರಸ್ಥರು ಬೇಸರ ಹೊರಹಾಕಿದ್ದಾರೆ.
ಆಷಾಢ ಮಾಸದಲ್ಲಿ ಒಳ್ಳೆಯ ವ್ಯಾಪಾರ ಆಗುತ್ತದೆ. ಆದರೆ ಜಿಲ್ಲಾಡಳಿತ ನಮಗೆ ಅವಕಾಶ ಮಾಡಿಕೊಡುತಿಲ್ಲ.ಇದರಿಂದ ನಮಗೆ ಸಮಸ್ಯೆ ಉಂಟಾಗಿದೆ. ಇದನ್ನೇ ನಂಬಿ ಬದುಕುತ್ತಿದ್ದೇವೆ. ಈ ರೀತಿ ಮಾಡಿದರೆ ಹೇಗೆ..? ವಾರದ ಎಲ್ಲಾ ದಿನಗಳು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
Key words: Ashada, Restrictions, shops, Chamundi Hills, Mysore