ಚಿಕ್ಕಮಗಳೂರು,ಜುಲೈ,3,2025 (www.justkannada.in): ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸರಣಿಸಾವಾಗುತ್ತಿದ್ದು ಜನರಿಗೆ ಆತಂಕ ಎದುರಾಗಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಹೃದಯಾಘಾತಕ್ಕೆ 29 ವರ್ಷದ ಯುವಕ ಬಲಿಯಾಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಶಿವಾನಿ ಗ್ರಾಮದ ಹರೀಶ್ ಸಾವನ್ನಪ್ಪಿದ ಯುವಕ. ತೆಂಗಿನ ಕಾಯಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್ ಗೆ ನಿನ್ನೆ ಬೆಳಿಗ್ಗೆ ವಾಂತಿಯಾಗಿದ್ದು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಮಾತ್ರೆ ನುಂಗಿ ಮಲಗಿದ್ದರು.
ಈ ನಡುವೆ ಮತ್ತೆ ವಾಂತಿಯಾಗಿದ್ದು ಬಳಿಕ ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಷ್ಟರಲ್ಲಾಗಲೇ ಹರೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Key words: 29-year, old Boy, dies, heart attack