ಮೈಸೂರು,ಜುಲೈ,1,2025 (www.justkannada.in): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ – 2025ಕ್ಕೆ ದಸರಾ ಗಜಪಡೆ ಆಯ್ಕೆ ಕಸರತ್ತು ಆರಂಭವಾಗಿದ್ದು ಗಜಪಡೆ ಕಟ್ಟುವ ಕಾರ್ಯ ತೀವ್ರಗೊಂಡಿದೆ.
7 ಕ್ಯಾಂಪ್ ಗಳಿಂದ 25 ಆನೆಗಳ ಹೆಲ್ತ್ ಕಾರ್ಡ್ ಸ್ವೀಕಾರ ಮಾಡಲಾಗಿದ್ದು ಎರಡು ವಾರಗಳಲ್ಲಿ ಲಿಸ್ಟ್ ಪ್ರಕಟವಾಗಲಿದೆ. ಆಗಸ್ಟ್ 4 ರಂದು ವೀರನಹೊಸಹಳ್ಳಿಯಲ್ಲಿ ಮೊದಲ ಹಂತದ ಗಜಪಡೆಗೆ ಸ್ವಾಗತ ಕಾರ್ಯ ನೆರವೇರಲಿದೆ.
ಮೈಸೂರು ದಸರಾಗೆ ಅರಣ್ಯಾಧಿಕಾರಿಗಳು ಈಗಾಗಲೇ 25 ಆನೆಗಳನ್ನ ಪರಿಶೀಲಿಸಿದ್ದು, ಈ ಬಾರಿಯೂ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಅಂಬಾರಿ ಹೊರುವ ಸಾಧ್ಯತೆ ಇದೆ. ಮತ್ತಿಗೋಡು ಕ್ಯಾಂಪ್‌ನಿಂದ ಭೀಮ, ಶ್ರೀಕಂಠ, ಪಾರ್ಥ, ದುಬಾರೆ ಕ್ಯಾಂಪ್ ನಿಂದ ಧನಂಜಯ, ಪ್ರಶಾಂತ್, ಕಂಜನ್, ಸುಗ್ರೀವ, ಶ್ರೀರಾಮ, ಹರ್ಷ, ಅಯ್ಯಪ್ಪ, ಹೇಮಾವತಿ, ದೊಡ್ಡ ಹರವೆ ಕ್ಯಾಂಪ್‌ನಿಂದ ಏಕಲವ್ಯ, ಭೀಮನಕಟ್ಟೆ ಕ್ಯಾಂಪ್‌ನಿಂದ ಗಣೇಶ, ಶ್ರೀರಂಗ, ರೂಪ, ಬಳ್ಳೆ ಕ್ಯಾಂಪ್ ನಿಂದ ಮಹೇಂದ್ರ, ದೊಡ್ಡಹರವೆ ಲಕ್ಷ್ಮಿ, ಬಂಡೀಪುರ ಹಳೇ ಕ್ಯಾಂಪಸ್ ನಿಂದ ಹಿರಣ್ಯ, ಲಕ್ಷ್ಮಿ, ರೋಹಿತ್, ಪಾರ್ಥ ಸಾರಥಿ, ಐರಾವತ ಹಾರಂಗಿ ಕ್ಯಾಂಪ್‌ನಿಂದ ಲಕ್ಷ್ಮಣ ಮತ್ತು ಈಶ್ವರ ಆನೆಗಳ ಪರಿಶೀಲನೆ ನಡೆಸಲಾಗಿದೆ.
25 ಆನೆಗಳ ಪೈಕಿ 14 ರಿಂದ 15 ಆನೆಗಳು ಮಾತ್ರ ದಸರಾ ಜಂಬೂಸವಾರಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಲಿದ್ದು 15 ದಿನಗಳ ಒಳಗೆ ಅಂತಿಮ ಪಟ್ಟಿ ಸಲ್ಲಿಸಲು ತಯಾರಿ ನಡೆಸಲಾಗುತ್ತಿದೆ. ಅಂತಿಮ ಪಟ್ಟಿ ತಯಾರಾದ ಬೆನ್ನಲ್ಲೆ ಆಗಸ್ಟ್ 4 ರಂದು ಮೊದಲ ಹಂತದಲ್ಲಿ 9 ಆನೆಗಳಿಗೆ ಗಜಪೂಜೆ ನೆರವೇರಲಿದ್ದು ಗಜಪಡೆ ಅರಮನೆ ಪ್ರವೇಶ ಮಾಡಲಿವೆ.
Key words: Mysore Dasara-2025, first phase, Gajapade, August 4th