Sunday, August 16, 2026

BDA Apartments

Home Front Page ಶಾಸಕರ ಎಲ್ಲಾ ಬೇಡಿಕೆಗಳನ್ನ ಈಡೇರಿಸಲು ಆಗಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಶಾಸಕರ ಎಲ್ಲಾ ಬೇಡಿಕೆಗಳನ್ನ ಈಡೇರಿಸಲು ಆಗಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜೂನ್,25,2025 (www.justkannada.in): ರಾಜ್ಯದಲ್ಲಿ ಆಡಳಿತ ಪಕ್ಷದ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶಾಸಕರ ಎಲ್ಲಾ ಬೇಡಿಕೆಗಳನ್ನ ಈಡೇರಿಸಲು ಆಗಲ್ಲ. ಅವರ ಅಸಮಾಧಾನವನ್ನ ಸಿಎಂ ಬಗೆಹರಿಸುತ್ತಾರೆ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದಾರೆ.  ವರಿಷ್ಟರು ಶಾಸಕರನ್ನ ಕರೆದು ಮಾತಾಡಿ ಅಂದ್ರೆ ಸಿಎಂ ಮಾತಾಡುತ್ತಾರೆ ಎಂದರು.

ಮಂತ್ರಿಗಳು ಶಾಸಕರ ಭೇಟಿ ಮಾಡುತ್ತಿಲ್ಲ ಎಂಬ  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಶಾಸಕರಿಗೆ ವೈಯಕ್ತಿಕವಾಗಿ ತೊಂದರೆ ಆಗಿರಬಹುದು. ಶಾಸಕರೇ ಹೇಳಿದ ಮೇಲೆ ಒಪ್ಪಬೇಕಲ್ವಾ ಅದನ್ನ ಸಿಎಂ ಬಗೆಹರಿಸುತ್ತಾರೆ.  ಸಿಎಲ್ ಪಿ ಸಭೆಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಮಂತ್ರಿಗಳು ಬೇಟಿಗೆ ಸಿಗುತ್ತಿಲ್ಲ ಎಂಬುದು ಇದೇನು  ಅಂತಹ ದೊಡ್ಡ ವಿಷಯ ಅಲ್ಲ ಸಿಎಂ ಬಗೆಹರಿಸತ್ತಾರೆ ಎಲ್ಲಾ ಸರ್ಕಾರಗಳಲ್ಲೂ ಶಾಸಕರ ಅಸಮಾಧಾನ ಇರುತ್ತದೆ.  ಶಾಸಕರ ಬೇಡಿಕೆಗಳನ್ನೂ ಸಂಪೂರ್ಣವಾಗಿ ಬಗೆಹರಿಸಲು ಆಗಲ್ಲ  ಎಂದು ಹೇಳಿದರು.vtu

Key words: Congress, MLAs, Dissatisfaction, Home Minister, Dr. G. Parameshwar