Tuesday, September 29, 2026

BDA Apartments

MYSORE DASARA 2025: ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ BDA JK_Adv BDA Adv
Home DASARA-2025 MYSORE DASARA 2025: ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ

MYSORE DASARA 2025: ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ

A “Dasara High-Level Committee Meeting” has been called under the leadership of Chief Minister Siddaramaiah in connection with the celebration of the world-famous national festival, Dasara Mahotsav. Mysore Deputy Commissioner Laxmikant Reddy informed “Just Kannada” that the Dasara High-Level Committee Meeting will be held at the Bengaluru Vidhana Soudha at 11 am tomorrow.

vtu

ಮೈಸೂರು, ಜೂ.೨೫,೨೦೨೫: ವಿಶ್ವ ಪ್ರಸಿದ್ಧ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಸಂಬಂದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  “ ದಸರಾ ಉನ್ನತ ಮಟ್ಟದ ಸಮಿತಿ ಸಭೆ (Dasara High-Level Committee Meeting) ಕರೆಯಲಾಗಿದೆ.

ನಾಳೆ ಬೆಳಗ್ಗೆ ೧೧ ಗಂಟೆಗೆ ಬೆಂಗಳೂರು ವಿಧಾನಸೌಧದಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ “ಜಸ್ಟ್‌ ಕನ್ನಡ” ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌,  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹಾದೇವಪ್ಪ, ಇಂಧನ ಸಚಿವ ಜಾರ್ಜ್‌ ಸೇರಿದಂತೆ ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಸೆಸ್ಕಾಂ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಮನೆ ಮಂಡಳಿ ಅಧಿಕಾರಿಗಳು ಪ್ರಮುಖವಾಗಿ ಭಾಗವಹಿಸುವರು.

ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ dc lakshmikanth reddy

ಸಭೆ ವಿಶೇಷ:

ಇದು ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಜ್ಜುಗೊಳಿಸುವಿಕೆಗೆ ನಡೆಸುವ ಪ್ರಮುಖ ಸಭೆಯಾಗಿದೆ. ಈ ಸಮಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಜತೆಗೆ ವಿವಿಧ ಇಲಾಖೆಗಳಿಂದ ಅಧಿಕಾರಿಗಳು, ಜನಪ್ರತಿನಿಧಿಗಳು, ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಮಾಹಿತಿಗಳ ಪ್ರಕಾರ ನಾಳಿನ ಸಭೆಯಲ್ಲಿ ಒಟ್ಟು ೬೨ ಮಂದಿಗೆ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಆಹ್ವಾನ ನೀಡಲಾಗಿದೆ.

ಈ ಸಭೆಯ ಉದ್ದೇಶಗಳು:

MYSORE DASARA 2025: ಬೆಂಗಳೂರಲ್ಲಿ ನಾಳೆ “ ದಸರಾ ಉನ್ನತಮಟ್ಟದ ಸಮಿತಿ” ಸಭೆ meeting

  1. ದಸರಾ ಕಾರ್ಯಕ್ರಮಗಳ ಯೋಜನೆ: ಮೈಸೂರು ದಸರಾ ಉತ್ಸವದ ವಿವಿಧ ಆಯೋಜನೆಗಳ ಬಗ್ಗೆ ಚರ್ಚೆ. ಪ್ರಮುಖ ಅಕರ್ಷಣೆಯಾದ ಜಂಬೂ ಸವಾರಿ, ಈ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ-ಸಂಸ್ಕೃತಿಕ ತಂಡಗಳ ಕಾರ್ಯಕ್ರಮಗಳು.
  2. ಸುರಕ್ಷತೆ ಮತ್ತು ವ್ಯವಸ್ಥೆ: ಪೊಲೀಸ್ ಬಂದೋಬಸ್ತ್‌, ಟ್ರಾಫಿಕ್ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು, ಅಗ್ನಿಶಾಮಕ ವ್ಯವಸ್ಥೆ ಮೊದಲಾದ ವ್ಯವಸ್ಥೆಗಳ ಕುರಿತು ನಿರ್ಧಾರ.
  3. ಹಣಕಾಸು ಮತ್ತು ಬೆಂಬಲ: ಸರ್ಕಾರದಿಂದ ನೀಡಲಾಗುವ ಅನುದಾನ, ಪ್ರಾಯೋಜಕರು, ಖರ್ಚು ಲೆಕ್ಕ.
  4. ಸಹಕಾರ ಮತ್ತು ಸಮನ್ವಯ: ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧನೆ.

KEY WORDS: Dasara High Level Committee, Bengaluru, Mysore dasara 2025, dasara, mysore, cm

vtu

SUMMARY: 

“Dasara High Level Committee” meeting tomorrow in Bengaluru

high-level committee meeting mahisha

A “Dasara High-Level Committee Meeting” has been called under the leadership of Chief Minister Siddaramaiah in connection with the celebration of the world-famous national festival, Dasara Mahotsav. Mysore Deputy Commissioner Laxmikant Reddy informed “Just Kannada” that the Dasara High-Level Committee Meeting will be held at the Bengaluru Vidhana Soudha at 11 am tomorrow.